ಐಗೂರು, ಮಾ.೨೩: ಶಾಲಾ ವಿದ್ಯಾರ್ಥಿಗಳಿಗೆ ಸಸ್ಯ ಕ್ಷೇತ್ರಗಳ ಬಗ್ಗೆ ಅರಿವು ಮೂಡಿಸಲು ಇಕೋ ಕ್ಲಬ್ ವತಿಯಿಂದ ಸಸ್ಯ ಕ್ಷೇತ್ರ ದರ್ಶನವನ್ನು ಏರ್ಪಡಿಸಲಾಗಿತ್ತು.

ಮಡಿಕೇರಿ ವಿಭಾಗದ ಸೋಮವಾರಪೇಟೆ ತಾಲೂಕಿನ ಕಾಜೂರು ಸಸ್ಯ ಕ್ಷೇತ್ರಕ್ಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಜೂರು, ಐಗೂರು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದದವರು ಭೇಟಿ ನೀಡಿದರು. ಕಾಜೂರು ಉಪ ಅರಣ್ಯಾಧಿಕಾರಿ ಲೋಹಿತ್ ಚಿvಡಿu ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಅರಣ್ಯದಲ್ಲಿರುವ ಆನೆಗಳ ಆಹಾರಕ್ಕೆ ಬಿದಿರು ಮತ್ತು ಹಲಸಿನ ಮರಗಳನ್ನು ಯಥೇಚ್ಛವಾಗಿ ಬೆಳೆಯುತ್ತಿದ್ದೇವೆ. ಪ್ರಾಣಿ ಪಕ್ಷಿಗಳ ಆಹಾರಕ್ಕಾಗಿ ಅತ್ತಿಮರ, ನೇರಳೆ ಮರಗಳನ್ನು ಬೆಳೆಯುತ್ತಿದ್ದು, ಪಕ್ಷಿಗಳು, ಮಂಗಗಳು ಮತ್ತು ಜಿಂಕೆಗಳು ಅತ್ತಿ ಹಣ್ಣು ಮತ್ತು ನೇರಳೆ ಹಣ್ಣುಗಳನ್ನು ಆಹಾರವಾಗಿ ಬಳಸುತ್ತಿವೆ. ಅರಣ್ಯದೊಳಗೆ ಬೆಳೆದ ಅರಳಿ ಮರಗಳು ಕಾರ್ಬನ್ ಡೈ-ಆಕ್ಸೆöÊಡ್ ತೆಗೆದುಕೊಂಡು ಆಮ್ಲಜನಕವನ್ನು ಬಿಡುಗಡೆಗೊಳಿಸಲು ಸಹಕಾರಿಯಾಗಿದೆ ಎಂದ ಅವರು ಮಹಾಗನಿ ಮತ್ತು ಸೀತಾಫಲದ ಸಸ್ಯಗಳನ್ನು ಸಾರ್ವಜನಿಕರು, ರೈತರು ಸತ್ಯ ಕ್ಷೇತ್ರದಿಂದ ಪಡೆದುಕೊಂಡು ಪ್ರಯೋಜನ ಪಡೆಯುತ್ತಿರುವುದಾಗಿ ತಿಳಿಸಿದರು.

ಕಾಜೂರು ಸಸ್ಯ ಕ್ಷೇತ್ರದ ನರ್ಸರಿ ಪಾಲಕ ಬಿ.ಆರ್ ಮುತ್ತಪ್ಪ ವಿದ್ಯಾರ್ಥಿಗಳಿಗೆ ಸಸ್ಯ ಕ್ಷೇತ್ರದ ಬಗ್ಗೆ ಹಲವು ಮಾಹಿತಿಗಳನ್ನು ನೀಡಿದರು. ಇಕೋ ಕ್ಲಬ್ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಕೃಷ್ಣಪ್ಪ, ಸತೀಶ್ ಕುಮಾರ್ ಮತ್ತು ಮಂಜುನಾಥ್, ಶಿಕ್ಷಕಿಯರಾದ ಅನಸೂಯ, ಮತ್ತು ರಂಜನಿ, ಡಿ.ಆರ್.ಎಫ್ ಲೋಹಿತ್ ಮತ್ತು ನರ್ಸರಿ ಪಾಲಕ ಬಿ.ಆರ್ ಮುತ್ತಪ್ಪ ಭಾಗವಹಿಸಿದ್ದರು.