ಮಡಿಕೇರಿ, ಮಾ. ೨೩: ಕೊಡಗು ಜಿಲ್ಲೆಯ ಪ್ರತಿಷ್ಟಿತ ಕ್ಲಬ್‌ಗಳಲ್ಲೊಂದಾದ ಮಡಿಕೇರಿಯ ಕಾಸ್ಮೋಪಾಲಿಟನ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಕಿರಿಯಮಾಡ ರತನ್ ತಮ್ಮಯ್ಯ ಆಯ್ಕೆಯಾಗಿದ್ದಾರೆ. ಆಡಳಿತ ಮಂಡಳಿ ಸಭೆಯಲ್ಲಿ ೨ ವರ್ಷಗಳ ಅವಧಿಗೆ ರತನ್ ತಮ್ಮಯ್ಯ ಅವರನ್ನು ಅಧ್ಯಕ್ಷರನ್ನಾಗಿ, ಮುಕ್ಕಾಟಿರ ಸಂಜು ಪೊನ್ನಪ್ಪ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಮತ್ತು ಸಂಜಯ್ ಹೆಚ್.ಎಲ್ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

೧೨೧ ವರ್ಷಗಳ ಇತಿಹಾಸವಿರುವ ಕಾಸ್ಮೋಪಾಲಿಟನ್ ಕ್ಲಬ್‌ನಲ್ಲಿ ೨೪೦ ಸದಸ್ಯರಿದ್ದಾರೆ, ರತನ್ ತಮ್ಮಯ್ಯ ರೋಟರಿ ಸಂಸ್ಥೆಯ ವಿವಿಧ ಹುದ್ದೆಗಳಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ.