ಮಡಿಕೇರಿ, ಮಾ.೨೩: ನಗರದ ಅಶೋಕಪುರ ಅಂಗನವಾಡಿ ಕೇಂದ್ರದ ಸಹಾಯಕಿ ರಾಣಿ ಅವರು ೨೦ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಗೊಂಡಿದ್ದು ಮಹಿಳಾ-ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಬೀಳ್ಕೊಡಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಪ್ರಸನ್ನ ಕುಮಾರ್ ಅವರು ಇಲಾಖೆಯಿಂದ ಹಮ್ಮೊಕೊಳ್ಳಲಾಗುತ್ತಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಗಿತಿ ನೀಡಿದರು. ಪ್ರಭಾರ ಸಾಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತ ಕೀರ್ತನ್ ಅವರು ಮಾತನಾಡಿ, ಪ್ರತಿ ತಿಂಗಳ ಮೊದಲನೆ ಶುಕ್ರವಾರ, ಮೂರನೇ ಶುಕ್ರವಾರ ಮತ್ತು ಶನಿವಾರದಂದು ಸಮುದಾಯ ಆಧಾರಿತ ಚಟುವಟಿಕೆಗಳು ಅಂಗನವಾಡಿ ಕೇಂದ್ರಗಳಲ್ಲಿ ನೆರವೇರುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಈ ಸಂದರ್ಭ ಮಕ್ಕಳ ದಾಖಲೆ ಕಾರ್ಯಕ್ರಮ ನೆರವೇರಿತು ಹಾಗೂ ಮಾತ್ರವಂದನ ದಾಖಲೆ ಕಾರ್ಯಕ್ರಮ ನೆರವೇರಿತು. ಅಂಗನವಾಡಿ ಕಾರ್ಯಕರ್ತೆ ಮೀರಾ ಸ್ವಾಗತಿಸಿದರು, ರಾಜೇಶ್ವರಿ ನಗರದ ಅಂಗನವಾಡಿ ಕಾರ್ಯಕರ್ತೆ ಇಂದಿರಾ ನಿರೂಪಣೆ ಮಾಡಿದರು. ವಂದನಾರ್ಪಣೆಯನ್ನು ಹೊಸ ಬಡಾವಣೆ ಅಂಗನವಾಡಿ ಕಾರ್ಯಕರ್ತೆ ಮುತ್ತಮ್ಮ ನೆರವೇರಿಸಿದರು. ಪ್ರಾರ್ಥನೆ ಅಂಗನವಾಡಿ ಮಕ್ಕಳಿಂದ ನೆರವೇರಿತು.