ಅಮೇರಿಕಾ, ಮಾ. ೨೩: ಹೊರ್ಮೋಜ್ ಜಲಸಂಧಿಯಲ್ಲಿನ ತಡೆಯನ್ನು ೪೮ ಗಂಟೆಗಳ ಅವಧಿಯೊಳಗೆ ಇರಾನ್ ತೆರವುಗೊಳಿಸದಿದ್ದಲ್ಲಿ ಇರಾನ್‌ನ ಪರಮಾಣು ಘಟಕಗಳ ಮೇಲೆ ದಾಳಿ ನಡೆಸುವ ಎಚ್ಚರಿಕೆ ನೀಡಿದ್ದ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಹಿಂದೆ ಸರಿದಿದ್ದು, ಮುಂದಿನ ೫ ದಿನಗಳ ಕಾಲ ಇರಾನ್‌ನ ಮಿಲಿಟರಿ ಕೇಂದ್ರಗಳು ಹಾಗೂ ಪರಮಾಣು ಘಟಕಗಳ ಮೇಲೆ ದಾಳಿ ನಡೆಸದಿರಲು ತೀರ್ಮಾನಿಸಿದ್ದಾಗಿ ತಮ್ಮ ‘ಟ್ರುತ್ ಸೋಷಿಯಲ್’ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಮಾಹಿತಿ ಹಂಚಿಕೊAಡಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಸಂಬAಧ ಇರಾನ್‌ನೊಂದಿಗೆ ಅಮೇರಿಕಾ ಕಳೆದೆರಡು ದಿನಗಳಿಂದ ಮಾತುಕತೆ ನಡೆಸುತ್ತಿದ್ದು, ಟ್ರಂಪ್ ಇದೀಗ ಈ ನಿರ್ಧಾರ ಕೈಗೊಂಡಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಸಂಪೂರ್ಣ ಶಾಂತಿ ಸ್ಥಾಪನೆ ಸಂಬAಧ ಚರ್ಚೆ ನಡೆದಿದೆ. ಮಾತುಕತೆ ಇನ್ನೊಂದು ವಾರಗಳ ಕಾಲ ಮುಂದುವರೆಯಲಿದೆ. ಈ ನಡುವೆ ಮುಂದಿನ ೫ ದಿನಗಳ ಕಾಲ ಇರಾನ್‌ನ ಮಿಲಿಟರಿ ಹಾಗೂ ಪರಮಾಣು ಕೇಂದ್ರಗಳ ಮೇಲೆ ದಾಳಿ ನಡೆಸದಿರಲು ಯುದ್ಧ ಸಚಿವಾಲಯಕ್ಕೆ ಆದೇಶಿಸಿದ್ದೇನೆ. ಮಾತುಕತೆ ಇನ್ನೂ ಕೆಲ ದಿನಗಳ ಕಾಲ ನಡೆಯಲಿದ್ದು, ಈ ನಡೆಯು ಮಾತುಕತೆ ಯಶಸ್ಸುಗೊಂಡರೆ ಮಾತ್ರ ಮುಂದುವರಿಯಲಿದೆ ಎಂಬುದಾಗಿ ಟ್ರಂಪ್ ಮಾಹಿತಿ ಹಂಚಿಕೊAಡಿದ್ದಾರೆ.

ಆದರೆ ಈ ಬಗ್ಗೆ ಇರಾನ್ ಹಾಗೂ ಇಸ್ರೇಲ್ ಸರಕಾರ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಇರಾನ್ ರಾಷ್ಟçವು ಪರಮಾಣು ಬಾಂಬ್ ತಯಾರಿಯಲ್ಲಿ ತೊಡಗಿದೆ ಎಂಬ ಮಾಹಿತಿ ಆಧಾರದಲ್ಲಿ ಯು.ಎಸ್.ಎ ಹಾಗೂ ಇಸ್ರೇಲ್ ಜಂಟಿ ಕಾರ್ಯಾಚರಣೆ ನಡೆಸಿ ಇರಾನ್ ಮೇಲೆ ಫೆ.೨೮ ರಂದು ದಾಳಿ ನಡೆಸಿ ಇರಾನ್‌ನ ಸರ್ವಾಧ್ಯಕ್ಷ ಅಲಿ ಖಮೀನಿ ಅವರನ್ನು ಹತ್ಯೆ ಮಾಡಿತ್ತು. ಇದಕ್ಕೆ ಪ್ರತೀಕಾರವಾಗಿ ಇರಾನ್ ಸೇನೆಯು ಇಸ್ರೇಲ್ ಮೇಲೆ ಹಾಗೂ ಮಧ್ಯಪ್ರಾಚ್ಯದಲ್ಲಿನ ಹಲವಾರು ರಾಷ್ಟçಗಳಲ್ಲಿ ನೆಲೆ ಕಂಡಿರುವ ಯು.ಎಸ್. ಮಿಲಿಟರಿ ಕೇಂದ್ರಗಳ ಮೇಲೆ ದಾಳಿ ನಡೆಸಲಾರಂಭಿಸಿತು. ದಾಳಿ-ಪ್ರತಿದಾಳಿ ಬಹುತೇಕ ಒಂದು ತಿಂಗಳು ಕಾಲ ಮುಂದುವರಿದಿದ್ದು, ಇದೀಗ ವಿರಾಮ ದೊರಕುವ ನಿರೀಕ್ಷೆಯಿದೆ.