ಕಣಿವೆ, ಮಾ.೨೩: ಪ್ರತಿ ವರ್ಷವೂ ಬೇಸಗೆಯ ಆರಂಭದ ಮಾರ್ಚ್ ತಿಂಗಳ ಆರಂಭದಿAದ ವಾಣಿಜ್ಯ ಬೆಳೆ ಶುಂಠಿ ಬಿತ್ತನೆ ಎಲ್ಲೆಡೆ ಕಂಡು ಬರುವ ಸಾಮಾನ್ಯ ಚಿತ್ರಣ.

ಹಳ್ಳಿ ಹಳ್ಳಿಗಳಲ್ಲಿ ಬಡವ ಬಲ್ಲಿದ ಎನ್ನದೇ ಎಲ್ಲರೂ ತಮ್ಮ ತಮ್ಮ ಶಕ್ತಾನುಸಾರ ಶುಂಠಿ ಬೆಳೆಯತ್ತ ಚಿತ್ತ ಹರಿಸುತ್ತಾರೆ. ಶುಂಠಿ ಫಸಲಿಗೆ ಮಾರುಕಟ್ಟೆಯಲ್ಲಿ ಬೆಲೆ ಇರಲಿ, ಇಲ್ಲದಿರಲಿ ಹಣ ಮಾಡಬೇಕೆಂಬ ಆಸೆಯ ಕುದುರೆಯಟಿನ್ನು ಏರುತ್ತಿದ್ದಾರೆ ಎಲ್ಲರು. ಕೃಷಿ ಕಾರ್ಮಿಕರ ಕೊರತೆಯ ನಡುವೆಯೂ ಹಳ್ಳಿಗಳಲ್ಲಿ ಮುಯ್ಯಾಳು ಪದ್ದತಿಯಡಿ ಪರಸ್ಪರ ಅಕ್ಕ ಪಕ್ಕದ ಮನೆಗಳ ಕೃಷಿಕರು ಈಗ ಶುಂಠಿ ಬಿತ್ತನೆಯಲ್ಲಿ ನಿರತರಾಗಿರುವ ಚಿತ್ರಣ ಕುಶಾಲನಗರ ತಾಲೂಕಿನ ಶಿರಂಗಾಲ ಗ್ರಾಮದಲ್ಲಿ ಕಂಡು ಬರುತ್ತಿದೆ.

ಬಿತ್ತನೆ ಬೀಜ ಚೀಲಕ್ಕೆ ೪,೦೦೦

ಕಳೆದ ಹಂಗಾಮಿನಲ್ಲಿ ರೈತರು ಕೈಗೊಂಡ ಶುಂಠಿ ಫಸಲಿಗೆ ಮಾರಕ ರೋಗಗಳು ಬಾಧಿಸಿದ ಪರಿಣಾಮ ಈ ಬಾರಿಯೂ ಬೆಲೆ ಸಿಗದೇ ಬಹಳಷ್ಟು ಮಂದಿ ಕೃಷಿಕರು ನಷ್ಟದ ಮೇಲೆ ನಷ್ಟಕ್ಕೆ ಸಿಲುಕಿದ್ದರು. ಬಂಡವಾಳ ಶಾಹಿ ಕೃಷಿಕರು ಮಾತ್ರ ಹಣ ವ್ಯಯಿಸಿ ರಸಾಯನಿಕ ತಂದು ಹೊಲಕ್ಕೆ ಸುರಿದು ರೋಗಗಳನ್ನು ಹತೋಟಿಗೆ ತಂದು ಒಂದಷ್ಟು ಶುಂಠಿಯನ್ನು ಉಳಿಸಿಕೊಂಡದ್ದರಿAದ ಮಾರುಕಟ್ಟೆಯಲ್ಲಿ ದರ ೨ ಸಾವಿರದಿಂದ ೨,೮೦೦ ರೂಗಳ ವರೆಗೂ ಏರಿಕೆಯಾಗಿತ್ತು. ರೋಗ ರಹಿತವಾಗಿದ್ದ ಶುಂಠಿ ಬಿತ್ತನೆ ಬೀಜ ಚೀಲಕ್ಕೆ ೪ ಸಾವಿರಕ್ಕೆ ಮಾರಾಟವಾಗಿತ್ತು.

ಶುಂಠಿ ಬೆಳೆಗೆ ನೀರೇ ಆಧಾರ

ಬೇಸಗೆ ಏರುತ್ತಿದ್ದಂತೆಯೇ ಅಂತರ್ಜಲ ಕ್ಷೀಣಿಸುತ್ತಿದೆ. ಹಾಗಾಗಿ ಬಿತ್ತನೆ ಮಾಡಿದ ಶುಂಠಿಗೆ ನೀರನ್ನು ನಿತ್ಯವೂ ಹರಿಸಬೇಕಾದ ಕಾರಣ ಇದ್ದಂತಹ ಕೊಳವೆ ಬಾವಿಗಳಲ್ಲಿ ನೀರು ಸ್ಥಗಿತವಾಗುತ್ತಿದೆ.

ಪರ್ಯಾಯವಾಗಿ ಕೊಳವೆ ಬಾವಿ ತೋಡಲು ಯಂತ್ರಗಳ ಲಾರಿಗಳನ್ನು ಭೂಮಿಗೆ ಇಳಿಸಿ ಮನಬಂದAತೆ ಭೂಮಿಯನ್ನು ತೂತ ಮಾಡಲಾಗುತ್ತಿದೆ. ೫೦೦ ಅಡಿಗೂ ಹೆಚ್ಚು ಭೂಮಿಯ ಒಳ ಹೊಕ್ಕರೂ ಕೂಡ ಕೊಳವೆ ಬಾವಿಗಳಲ್ಲಿ ನೀರು ಕಾಣದ ಕಾರಣ ಭೂ ತಾಯಿಯ ಗರ್ಭವನ್ನು ಬೇಧಿಸಿ ನೀರನ್ನು ಹೊರತೆಗೆಯಲಾಗುತ್ತಿದೆ.

ಬಿತ್ತನೆಯಿಂದ ಕಟಾವಿನವರೆಗೂ ಶೀತಾಂಶ ಮುಖ್ಯ

ರೈತರ ವಾಣಿಜ್ಯ ಬೆಳೆಯಾದ ಈ ಶುಂಠಿಗೆ ಏಳರಿಂದ ಒಂಭತ್ತನೆ ತಿಂಗಳ ಕಟಾವಿನವರೆಗೂ ನಿರಂತರವಾಗಿ ನೀರು ಹರಿಸಿ ಹೊಲದಲ್ಲಿ ಶೀತಾಂಶ ನಿರ್ವಹಣೆ , ಅಂತರ್ಜಲ ಕುಸಿತಕ್ಕೆ ಕಾರಣವಾದ ಅಂಶವಾಗಿದೆ.

ಎಕರೆಗೆ ೫ ಲಕ್ಷ ಖರ್ಚು

ಒಂದು ಎಕರೆ ಹೊಲ ಗದ್ದೆಯಲ್ಲಿ ಶುಂಠಿ ಬೆಳೆಯಲು ಬಿತ್ತನೆಯಿಂದ ಕಟಾವಿನ ಏಳೆಂಟು ತಿಂಗಳ ಅವಧಿಗೆ ಬರೋಬ್ಬರಿ ೫ ಲಕ್ಷ ಹಣ ಖರ್ಚಾಗುತ್ತದೆ. ಶುಂಠಿ ಬಿತ್ತನೆಯ ಒಂದು ಎಕರೆ ಭೂಮಿಗೆ ೮೦ ಸಾವಿರ ರೂ, ೨೫ ಚೀಲ ಬಿತ್ತನೆ ಶುಂಠಿಗೆ ೧ ಲಕ್ಷ ರೂ, ಬಿತ್ತನೆಗೂ ಮುನ್ನಾ ಉಳುಮೆಗೆ ೨೦ ಸಾವಿರ, ಪಟ ಮಾಡಿ ಬಿತ್ತನೆ ಮಾಡಲು ಕೃಷಿ ಕಾರ್ಮಿಕರ ಕೂಲಿ ೨೦ ಸಾವಿರ, ರಸಾಯನಿಕ ಗೊಬ್ಬರ, ಕೋಳಿ ಗೊಬ್ಬರ, ದನಗಳ ಗೊಬ್ಬರ ೨೫ ಸಾವಿರ, ನೀರಾವರಿ ಪೈಪುಗಳ ಜೋಡಣೆಗೆ ೫೦ ಸಾವಿರ, ಬಿತ್ತನೆಯ ನಂತರ ಕಟಾವಿನ ತನಕ ಕಳೆ, ಮಣ್ಣು ಕೊಡುವುದು, ರಸಾಯನಿಕ ಸಿಂಪಡಣೆ ನಿರ್ವಹಣೆಗೆ ೧ ಲಕ್ಷ.

ಹೀಗೆ ಒಂದು ಎಕರೆಯಲ್ಲಿ ಶುಂಠಿ ಬೆಳೆಯಲು ಬರೋಬ್ಬರಿ ೫ ಲಕ್ಷ ರೂ ವ್ಯಯವಾಗುತ್ತದೆ.

ರಸಾಯನಿಕಯುಕ್ತ ಮಣ್ಣು

ಶುಂಠಿಗೆ ಬಾಧಿಸುವ ರೋಗ ಹತೋಟಿಗೆ ಬಿತ್ತನೆಯ ಒಂದು ತಿಂಗಳ ನಂತರ ಕಟಾವಿನ ತನಕ ಪ್ರತೀ ೨೦ ದಿನಗಳಿಗೊಮ್ಮೆ ನಿರಂತರವಾಗಿ ವಿವಿಧ ರಸಾಯನಿಕಗಳನ್ನು ಸಿಂಪಡಿಸಬೇಕಾದ ಕಾರಣ ಭೂಮಿಯ ರಸಸಾರ ಖಾಲಿಯಾಗುತ್ತಿದ್ದು ಮಣ್ಣು ಸತ್ವ ಕಳೆದುಕೊಳ್ಳುತ್ತಿದೆ ಎಂಬುದು ಕೃಷಿ ವಿಜ್ಞಾನಿಗಳ ವಾದ.

ಕೃಷಿಕನಿಗೆ ಖುಷಿ ಶುಂಠಿಯ ಬೆಳೆ - ಬೆಲೆ

ಒಟ್ಟಾರೆ ಅಂತರ್ಜಲ ಅಳಿಸಿ, ಮಣ್ಣಿನಲ್ಲಿನ ಲವಣಾಂಶಗಳನ್ನು ನಾಶ ಮಾಡಿ ಪರಿಸರವನ್ನು ವಿಷಮಯಗೊಳಿಸುವ ಶುಂಠಿ ಬೆಳೆ ರೈತಾಪಿಗಳಿಗೆ ಅದೃಷ್ಟದ ಬೆಳೆ ಎಂದೇ ಹೇಳಬಹುದು.

ಹೇಗೆಂದರೆ, ಬೆಳೆಗೆ ಯಾವುದೇ ವೈರಸ್ ಕಾಡದೆಯೇ, ರೋಗ ಬಾಧೆಯಿಂದ ದೂರ ಉಳಿದು ಬೆಳೆ ಚೆಂದ ಬಂದು ಮಾರುಕಟ್ಟೆಯಲ್ಲೂ ಉತ್ತಮ ಬೆಲೆ ಬಂದರೆ ಕೃಷಿಕನಿಗೆ ಇನ್ನಿಲ್ಲದ ಖುಷಿ.

ಏನಾದರೂ ಬೆಳೆ ರೋಗಪೀಡಿತಗೊಂಡರೆ ಕೃಷಿಕನ ಮನೆಯ ಸ್ಥಿತಿಯೂ ಕೃಷಮಯ. ಏನೇ ಇರಲಿ, ಈ ಬಾರಿಯಾದರೂ ಶುಂಠಿ ಫಸಲು ಕೃಷಿಕನ ಕೈ ಹಿಡಿಯಲಿ ಅಷ್ಟೆ.

ಕೆ. ಎಸ್. ಮೂರ್ತಿ

ಕುಶಾಲನಗರ.