ಮಡಿಕೇರಿ, ಮಾ. ೨೪: ದಶಕಗಳಿಂದ ಬೆಂಗಳೂರಿ ನಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಸ್ತುಶಿಲ್ಪಿ ಪೊನ್ನಚಂಡ ನರೇಶ್ ಮೇದಪ್ಪ ಅವರಿಗೆ ದಿ ಪ್ಲಾನ್ ಅವಾರ್ಡ್ ೨೦೨೫ ಲಭಿಸಿದ್ದು ಇಟಲಿಯ ಮಿಲನ್‌ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಭುವನೇಶ್ವರದಲ್ಲಿರುವ ಬೆಂಗಳೂರು ಹಾಸ್ಪಿಸ್ ಟ್ರಸ್ಟ್ನ ಕರುಣಾಶ್ರಯ ಪಾಲಿಯೇಟರ್ ಕೇರ್ ಸೆಂಟರ್ ಸಂಸ್ಥೆ ನಿರ್ಮಾಣಕ್ಕೆ ಇವರು ನಿರ್ಮಿಸಿದ ವಾಸ್ತುಶಿಲ್ಪವನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮೇದಪ್ಪ ಅವರು ಬೆಂಗಳೂರಿನ ಮೈಂಡ್ ಸ್ಪೇಸ್ ಆರ್ಕಿಟೆಕ್ಟ್ ಸಂಸ್ಥೆಯ ಪಾಲುದಾರರಾಗಿದ್ದು, ಭುವನೇಶ್ವರದಲ್ಲಿ ಅವರು ವಿನ್ಯಾಸಗೊಳಿಸಿದ ಈ ಯೋಜನೆ ಮಾನವ ಕೇಂದ್ರಿತ ಮತ್ತು ಸಂವೇದನಾಶೀಲ ವಿನ್ಯಾಸಕ್ಕಾಗಿ ಮೆಚ್ಚುಗೆ ಪಡೆದಿದ್ದು ಅಂತರರಾಷ್ಟಿçÃಯ ಮಟ್ಟದಲ್ಲಿ ಗಮನ ಸೆಳೆದಿತ್ತು.
ಇವರು ಮಡಿಕೇರಿಯ ದಿ. ಪಿ.ಎಂ. ನಾಣಯ್ಯ ಮತ್ತು ಕೆ.ಎಸ್. ಪಾರ್ವತಿ ಅವರ ಪುತ್ರ.