ಐಗೂರು, ಮಾ.೨೪: ಮಾನವ ಮತ್ತು ವನ್ಯಜೀವಿಯ ಸಂಘರ್ಷದ ಕುರಿತಾದ ಕಾರ್ಯಕ್ರಮ ತಾಲೂಕಿನ ಕುಮಾರಳ್ಳಿ ಗ್ರಾಮದ ಹೆಗ್ಗಡೆಮನೆಯಲ್ಲಿ ಆಯೋಜಿಸಲಾಗಿತ್ತು.

ಮಡಿಕೇರಿ ವನ್ಯಜೀವಿ ವಿಭಾಗದ ಪುಷ್ಪಗಿರಿ ವನ್ಯಜೀವಿ ವಲಯದ ವತಿಯಿಂದ ರಾಷ್ಟಿçÃಯ ಹುಲಿ ಪ್ರಾಧಿಕಾರದ ಮ್ಯಾನೇಜ್ಮೆಂಟ್ ಆಫ್ ಟೈಗರ್ಸ್ ಔಟ್ ಸೈಡ್ ಟೈಗರ್ ರಿಸರ್ವ್ ಯೋಜನೆಯಡಿಯಲ್ಲಿ ರೂಪುಗೊಂಡ ‘ಹುಲಿ ಮಿತ್ರ’ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖಾಧಿಕಾರಿಗಳು ಮಾನವ ಮತ್ತು ವನ್ಯಜೀವಿಯ ಸಂಘರ್ಷ ಹಾಗೂ ಬೆಳೆ ಹಾನಿಯ ಕುರಿತು ಕುಮಾರಳ್ಳಿ ಮತ್ತು ಹೆಗ್ಗಡೆಮನೆಯ ಗ್ರಾಮಸ್ಥರೊಂದಿಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಕಾಡಂಚಿನಲ್ಲಿ ವಾಸಿಸುವ ರೈತರು, ಬೆಳೆಗಾರರು ಕಾಡು ಪ್ರಾಣಿಗಳಿಂದಾಗುವ ತೊಂದರೆ ಮತ್ತು ಸಮಸ್ಯೆಗಳನ್ನು ಸಭೆಯಲ್ಲಿದ್ದ ಇಲಾಖಾಧಿಕಾರಿಗಳ ಗಮನಕ್ಕೆ ತಂದರು.

ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸುವುದಾಗಿ ಇಲಾಖಾಧಿಕಾರಿಗಳು ಭರವಸೆ ಇತ್ತರು.ಕಾರ್ಯಕ್ರಮದಲ್ಲಿ ಪುಷ್ಪಗಿರಿ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ದಿನೇಶ್ ಕೆ, ಉಪ ವಲಯ ಅರಣ್ಯಾಧಿಕಾರಿ ಶ್ರೀ ರವಿಕಿರಣ್, ಬೀಟ್ ಫಾರೆಸ್ಟರ್ ರಾಘವೇಂದ್ರ ಯು ಹಾಗೂ ಸ್ಥಳೀಯ ಮುಖಂಡರು, ಅರಣ್ಯ ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.