ಕೂಡಿಗೆ, ಮಾ. ೨೪: ಶಿವಮೊಗ್ಗದ ಹುಲಿ-ಸಿಂಹಧಾಮದಲ್ಲಿ ಪ್ರಾಣಿಗೆ ಚಿಕಿತ್ಸೆ ನೀಡಲೆಂದು ತೆರಳಿದ್ದ ಸಂದರ್ಭ ನೀರಾನೆ ದಾಳಿಯಿಂದ ಮೃತಪಟ್ಟ ಡಾ. ಸಮೀಕ್ಷಾ ರೆಡ್ಡಿ ಸಾವಿನ ಪ್ರಕರಣ ಸಂಬAಧ ಸೂಕ್ತ ತನಿಖೆ ಕೈಗೊಂಡು, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ಕುಶಾಲನಗರ ಪಶುವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ಪಶು ವೈದ್ಯಕೀಯ ಸಂಘ ಕೊಡಗು ಶಾಖಾ ವತಿಯಿಂದ ಪ್ರತಿಭಟನೆ ನಡೆಯಿತು. ವೈದ್ಯರು ಕಪ್ಪುಪಟ್ಟಿ ಧರಿಸಿ ನ್ಯಾಯಕ್ಕೆ ಆಗ್ರಹಿಸಿದರು. ಸಂಘದ ಅಧ್ಯಕ್ಷ ಡಾ. ಲಿಂಗರಾಜ್ ದೊಡ್ಡಮನಿ, ಡಾ. ಸಂಜೀವ ಕುಮಾರ್ ಶಿಂಧೆ. ಡಾ. ಸಿದ್ದಲಿಂಗಯ್ಯ ಹಿರೇಮಠ, ಡಾ. ಅಮೃತಾ ಹಾಗೂ ಇಲಾಖೆ ಸಿಬ್ಬಂದಿ ಹಾಜರಿದ್ದರು.