ಕೋವರ್ ಕೊಲ್ಲಿ ಇಂದ್ರೇಶ್
ಬೆಂಗಳೂರು, ಮಾ. ೨೪: ರೂ. ೩.೬೨ ಕೋಟಿ ಸೈಬರ್ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಸರ್ಕಾರಿ ಶಾಲಾ ಶಿಕ್ಷಕನಿಗೆ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನಿರಾಕರಿಸಿ ಆದೇಶಿಸಿದೆ. ನ್ಯಾಯಾಲಯವು ಅನುಮಾನಾಸ್ಪದ ಹಣಕಾಸಿನ ವಹಿವಾಟುಗಳು ಮತ್ತು ಅರ್ಜಿದಾರನ ಕಸ್ಟಡಿ ವಿಚಾರಣೆಯ ಅಗತ್ಯವನ್ನು ಉಲ್ಲೇಖಿಸಿದೆ..
ಗದಗ ಜಿಲ್ಲೆಯ ಗಣಿತ ಶಿಕ್ಷಕ ಇಂದುಧರ್ ಮಲ್ಲಿಕಾರ್ಜುನ್ ಕಾತರಕಿ (೨೫) ಪ್ರಸ್ತುತ ಗೋಕಾಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಈತನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ನಿಬಂಧನೆಗಳ ಅಡಿಯಲ್ಲಿ ಬಂಧನದಿAದ ರಕ್ಷಣೆ ಕೋರಿ ನ್ಯಾಯಾಲಯವನ್ನು ಸಂಪರ್ಕಿಸಿದ್ದ. ಆದರೆ ಸಿಐಡಿ ತನಿಖಾಧಿಕಾರಿಗಳು ಪ್ರಸ್ತುತಪಡಿಸಿದ ಸಾಕ್ಷ್ಯಗಳನ್ನು ಪರಿಶೀಲಿಸಿದ ನಂತರ ನ್ಯಾಯಾಲಯವು ಆತನ ಮನವಿಯನ್ನು ತಿರಸ್ಕರಿಸಿದೆ.
ಮಡಿಕೇರಿಯ ನಿವಾಸಿ ಕೆ.ಕೆ. ಬೆಳ್ಳಿಯಪ್ಪ ಎಂಬ ಹಿರಿಯ ನಾಗರಿಕರಿಗೆ ಕಳೆದ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಆನ್‌ಲೈನ್ ವಂಚಕರ ತಂಡವು ತಾವು ರಿಲಯನ್ಸ್ ಕಂಪೆನಿಯ ಷೇರು ಹೂಡಿಕೆ ಅಧಿಕಾರಿಗಳು ಎಂದು ಆಂಗ್ಲ ಭಾಷೆಯಲ್ಲಿ ಮಾತನಾಡಿ ಹೂಡಿಕೆ ಮಾಡುವಂತೆ ಮನವೊಲಿಸಿ ಏಪ್ರಿಲ್ ತಿಂಗಳಿನಿAದ ಜೂನ್ ತಿಂಗಳವರೆಗೂ ಹಂತ ಹಂತವಾಗಿ ಸುಮಾರು ೩.೬೪ ಕೋಟಿ ರೂಪಾಯಿಗಳನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದರು. ನಂತರ ಹಣವನ್ನು ಹಿಂತಿರುಗಿಸುವAತೆ ಒತ್ತಾಯ ಮಾಡಿದಾಗ ಎರಡು ಕಂತುಗಳಲ್ಲಿ ೨ ಲಕ್ಷ ರೂಪಾಯಿನಂತೆ ೪ ಲಕ್ಷ ಹಿಂತಿರುಗಿಸಿ ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು.
ಜುಲೈ ನಾಲ್ಕರಂದು ಬೆಳ್ಳಿಯಪ್ಪ ಕೊಡಗು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿ ವಂಚನೆ ಆಗಿದ್ದಾಗಿ ತಿಳಿಸಿ ಐವರು ವಂಚಕರ ವಿರುದ್ದ ಪ್ರಕರಣ ದಾಖಲಿಸಿದ್ದರು. ದೊಡ್ಡ ಮೊತ್ತ ಆಗಿರುವುದರಿಂದ ಮತ್ತು ದೇಶಾದ್ಯಂತ ವಂಚನಾ ಜಾಲ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ಒಪ್ಪಿಸಿತ್ತು. ತನಿಖಾಧಿಕಾರಿಗಳ ಪ್ರಕಾರ, ವಂಚನೆಗೊಳಗಾದ ಹಣವನ್ನು ಸೈಬರ್ ಅಪರಾಧ ಕಾರ್ಯಾಚರಣೆಗಳಲ್ಲಿ ಅಕ್ರಮ ಹಣವನ್ನು ವರ್ಗಾಯಿಸಲು ಬಳಸಲಾಗುವ ಬ್ಯಾಂಕ್ ಖಾತೆಗಳ ಮೂಲಕ ರವಾನಿಸಲಾಗಿದೆ. ತನಿಖೆಯ ಸಮಯದಲ್ಲಿ, ಕಾತರಕಿಯ ಬ್ಯಾಂಕ್ ಖಾತೆಯಲ್ಲಿ ಅವರ ಆದಾಯದ ಪ್ರೊಫೈಲ್‌ಗೆ ಹೊಂದಿಕೆಯಾಗದ ವಹಿವಾಟುಗಳಲ್ಲಿ ತೀವ್ರ ಏರಿಕೆ ಕಂಡುಬAದಿದೆ ಎಂದು ಅಧಿಕಾರಿಗಳು ಪತ್ತೆ ಮಾಡಿದರು. ೨೦೨೧ ರಲ್ಲಿ ಅವರ ಉಳಿತಾಯ ಖಾತೆಯು ಸುಮಾರು ೫ ಲಕ್ಷದ ವಹಿವಾಟು ತೋರಿಸಿದ್ದು, ೨೦೨೫ ರಲ್ಲಿ ವಹಿವಾಟುಗಳು ರೂ. ೩೦ ಲಕ್ಷಕ್ಕೂ ಹೆಚ್ಚು ಏರಿಕೆ ಆಗಿತ್ತು. ಇದು ವಂಚನೆಯ ಹಣದ ಸಾಗಣೆಯನ್ನು ಸುಗಮಗೊಳಿಸುವಲ್ಲಿ ಆತನ ಪಾತ್ರದ ಬಗ್ಗೆ ಗಂಭೀರ ಅನುಮಾನವನ್ನು ಹುಟ್ಟು ಹಾಕಿತು.
ನಂತರ ಸಿಐಡಿ ಪೊಲೀಸರು ಫೆಬ್ರವರಿ ೨೦೨೬ ರಲ್ಲಿ ಆರೋಪಿಯನ್ನು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದರು. ಆದರೆ ಪರೀಕ್ಷಾ ಸಮಯ ಆಗಿರುವುದರಿಂದ ವಿದ್ಯಾರ್ಥಿಗಳಿಗೆ ಬೋಧನೆ, ಸಹಾಯ ಮಾಡುವುದು ಮತ್ತು ತರಗತಿಗಳನ್ನು ನಡೆಸುವುದು ಮುಂತಾದ ವೃತ್ತಿಪರ ಬದ್ಧತೆಗಳನ್ನು ಉಲ್ಲೇಖಿಸಿ ಆತನು ತನಿಖೆಗೆ ಹಾಜರಾಗಲಿಲ್ಲ.
ಆದರೆ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ತನ್ನನ್ನು ತಪ್ಪಾಗಿ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಮತ್ತು ತಾನು ವಂಚನೆಯಲ್ಲಿ ಭಾಗಿಯಾಗಿಲ್ಲ, ನಿರಪರಾಧಿ ಎಂದು ಆತ ವಾದಿಸಿದನು. ಆದರೆ ಸಿಐಡಿ ವಕೀಲರು ಜಾಮೀನು ಅರ್ಜಿಯನ್ನು ವಿರೋಧಿಸಿ, ಹಗರಣದ ಹಿಂದಿನ ದೊಡ್ಡ ಅಂತರರಾಜ್ಯ ಸೈಬರ್ ಅಪರಾಧ ಜಾಲವನ್ನು ಬಹಿರಂಗಪಡಿಸಲು ಕಸ್ಟಡಿ ವಿಚಾರಣೆ ಅತ್ಯಗತ್ಯ ಎಂದು ಒತ್ತಿ ಹೇಳಿದರು. ವಂಚನೆಗೊಳಗಾದ ಮೊತ್ತದ ಬಹುಪಾಲು ರೂ. ೩.೫ ಕೋಟಿಗೂ ಹೆಚ್ಚು ಇನ್ನೂ ಪತ್ತೆಯಾಗಿಲ್ಲ ಮತ್ತು ಪ್ರಮುಖ ಆರೋಪಿಗಳ ಪತ್ತೆಗೆ ಈತನ ವಿಚಾರಣೆ ಅತ್ಯಗತ್ಯ ಎಂದು ಅವರು ವಾದಿಸಿದರು. ಅರ್ಜಿ ವಿಚಾರಣೆಯಲ್ಲಿ ಆರೋಪಿಯು ನಿರಪರಾಧಿ ಎಂದು ಹೇಳಿಕೊಂಡರೂ, ತನ್ನ ಹೇಳಿಕೆಗೆ ಬೆಂಬಲವಾಗಿ ತನ್ನ ಬ್ಯಾಂಕ್ ಸ್ಟೇಟ್‌ಮೆಂಟ್ ಸಲ್ಲಿಸಲು ವಿಫಲನಾಗಿದ್ದಾನೆ ಎಂದು ನ್ಯಾಯಾಲಯ ಗಮನಿಸಿತು. ಇದನ್ನು ಗಣನೆಗೆ ತೆಗೆದುಕೊಂಡು, ಈ ಹಂತದಲ್ಲಿ ನಿರೀಕ್ಷಣಾ ಜಾಮೀನು ನೀಡುವುದರಿಂದ ತನಿಖೆಗೆ ಅಡ್ಡಿಯಾಗಬಹುದು ಎಂದು ನ್ಯಾಯಾಧೀಶರು ಗಮನಿಸಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಆದೇಶಿಸಿದರು.
ಮತ್ತೊಂದು ಪ್ರಕರಣ
ಇಂತಹ ವಂಚನೆಯ ಪ್ರಕರಣ ಜಿಲ್ಲೆಯಲ್ಲೂ ನಡೆಯುತ್ತಿದ್ದು, ಅಮಾಯಕರು ಹಣ ಕಳೆದುಕೊಳ್ಳುತ್ತಿದ್ದಾರೆ. ಮರಗೋಡು ಹೊಸಕೇರಿ ನಿವಾಸಿ ಬಿ.ಆರ್. ಲಕ್ಷಿö್ಮÃಪತಿ ಎಂಬವರು ಕೂಡ ಹಿಂದೆ ಪೊಲೀಸರಿಗೆ ದೂರು ನೀಡಿದ್ದು, ಹಣ ಕಳೆದುಕೊಂಡ ಬಗ್ಗೆ ವಿವರಿಸಿದ್ದಾರೆ.
ಬಜಾಜ್ ಫೈನಾನ್ಸ್ನಲ್ಲಿ ಹೂಡಿಕೆ ಮಾಡಲು ಬಂದ ದೂರವಾಣಿ ಕರೆಯನ್ನು ನಂಬಿ ರೂ. ೨೩,೯೩,೯೭೨ ಅನ್ನು ತಾನು ಪಾವತಿ ಮಾಡಿದ್ದು, ಇದೀಗ ವಂಚಕರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ದೂರಿನಲ್ಲಿ ವಿವರಿಸಿದ್ದಾರೆ.