ಶನಿವಾರಸAತೆ, ಮಾ. ೨೫: ಪಟ್ಟಣದ ಕುರುಹಿನಶೆಟ್ಟಿ ಸಮಾಜದ ವತಿಯಿಂದ ಮುಖ್ಯ ರಸ್ತೆಯಲ್ಲಿರುವ ಶ್ರೀ ರಾಮ ಮಂದಿರದಲ್ಲಿ ರಾಮ ನವಮಿ ಆಚರಣೆಗಾಗಿ ಆರಂಭವಾಗಿರುವ ರಾಮೋತ್ಸವ ಪ್ರಯುಕ್ತ ೬ನೇ ದಿನ ಮಂಗಳವಾರ ರಾತ್ರಿ ಶ್ರೀಸೀತಾ, ಲಕ್ಷö್ಮಣ, ಆಂಜನೇಯ ಸಹಿತ ಶ್ರೀರಾಮ ದೇವರ ಉತ್ಸವ ಮೂರ್ತಿಗಳಿಗೆ ವಿಳ್ಯದೆಲೆ ಅಲಂಕಾರ ಮಾಡಿ ಪೂಜಿಸಲಾಯಿತು. ರಾತ್ರಿ ಮಹಾ ಮಂಗಳಾರತಿ, ತೀರ್ಥ- ಪ್ರಸಾದ ವಿನಿಯೋಗವಾಯಿತು.ಅರ್ಚಕ ಸುಹಾಸ್ ಭಟ್ ಲಲಿತಾ ಸಹಸ್ರನಾಮ ಪಠಣ ಮಾಡಿ ಪೂಜಾ ಕೈಂಕರ್ಯ ನೆರವೇರಿಸಿದರು. ಭಕ್ತಾದಿಗಳು ಪೂಜಾ ಕಾರ್ಯಕ್ರಮದಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು.ಸೇವಾ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.