ನಾಪೋಕ್ಲು, ಮಾ. ೨೯: ಜೀಪು ಅಪಘಾತದಲ್ಲಿ ವ್ಯಕ್ತಿಯೊಬ್ಬರು ದುರ್ಮರಣಕ್ಕೀಡಾದ ಘಟನೆ ಪೇರೂರು ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.

ಬಲ್ಲಮಾವಟಿ ಗ್ರಾಮ ಪಂಚಾಯಿತಿಯ ಪೇರೂರು ಗ್ರಾಮದ ನಿವಾಸಿ ರೈತ ಬೊಟ್ಟೋಳಂಡ ಶರಿ ಮೇದಪ್ಪ(೫೪) ಮೃತಪಟ್ಟವರಾಗಿದ್ದಾರೆ.

ಕಾರ್ಮಿಕರೊಂದಿಗೆ ತಮ್ಮ ಜೀಪ್‌ನಲ್ಲಿ ಕಾಫಿ ತೋಟದಿಂದ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭ ಶರಿ ಮೇದಪ್ಪ ಚಾಲನೆ ಮಾಡುತ್ತಿದ್ದ ಜೀಪು ಅವರ ನಿಯಂತ್ರಣ ತಪ್ಪಿ ರಸ್ತೆಯಿಂದ ಸುಮಾರು ೭೦ ಅಡಿ ಕೆಳಕ್ಕೆ ಉರುಳಿ ಬಿದ್ದಿದೆ.

ಈ ಸಂದರ್ಭ ಜೀಪಿನಿಂದ ಹೊರಕ್ಕೆ ಎಸೆಯಲ್ಪಟ್ಟ ಮೇದಪ್ಪ ಪ್ರಜ್ಞೆ ಕಳೆದುಕೊಂಡಿದ್ದರು. ಬಳಿಕ ನಾಪೋಕ್ಲುವಿನಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಡಿಕೇರಿಗೆ ಸಾಗಿಸುತ್ತಿದ್ದ ಸಂದರ್ಭ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಜೀಪು ಸಂಪೂರ್ಣ ಜಖಂಗೊAಡಿದ್ದು ಕಾರ್ಮಿಕರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಮೃತ ಶರಿ ಮೇದಪ್ಪ ಅವಿವಾಹಿತರಾಗಿದ್ದರು. - ದುಗ್ಗಳ ಸದಾನಂದ.