ಮಡಿಕೇರಿ, ಮಾ. ೨೯: ಅತ್ಯುತ್ತಮ ಕಾರ್ಯನಿರ್ವಹಣೆಗೆ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ನೀಡಲಾಗುವ ಮುಖ್ಯಮಂತ್ರಿಗಳ ಪದಕಕ್ಕೆ ಕೊಡಗಿನವರಾದ, ಪ್ರಸ್ತುತ ಹಾಸನ ಅಡಿಷನಲ್ ಎಸ್‌ಪಿಯಾಗಿರುವ ಮಾದಪಂಡ ಕೆ. ತಮ್ಮಯ್ಯ ಹಾಗೂ ಈ ಹಿಂದೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಡಾ. ಸುಮನ್ ಪನ್ನೇಕರ್ ಅವರುಗಳು ಭಾಜನರಾಗಿದ್ದಾರೆ.
ತಮ್ಮಯ್ಯ ಅವರು ಜಿಲ್ಲೆಯ ರಂಗಸಮುದ್ರ ನಿವಾಸಿಯಾಗಿದ್ದು, ಹಾಸನ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸುಮನ್ ಪನ್ನೇಕರ್ ಅವರು ಜಿಲ್ಲೆಯಲ್ಲಿ ೨೦೧೮-೨೦ರ ಅವಧಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಭೂಕುಸಿತ, ಕೊರೊನಾ ಸಂದರ್ಭದಲ್ಲಿ ಇವರು ಉತ್ತಮ ಕಾರ್ಯನಿರ್ವಹಿಸಿದ್ದನ್ನು ಸ್ಮರಿಸಬಹುದು.