ಮಡಿಕೇರಿ, ತಾ. ೩೦: ಪುಟಾಣಿನಗರದಲ್ಲಿ ಮಗುವಿನೊಂದಿಗೆ ಮಲಗಿದ್ದ ತಾಯಿಯ ಮೊಬೈಲ್ ಫೋನನ್ನು ತಡ ರಾತ್ರಿ ದುಷ್ಕರ್ಮಿಗಳು ಕಿಟಕಿಯ ಮೂಲಕ ಕೈ ಹಾಕಿ ಕದ್ದೊಯ್ದ ಘಟನೆ ನಡೆದಿದೆ.

ಮಮತ ಭರತ್ ಪೂಜಾರಿ ಎಂಬವರು ತಮ್ಮ ಎಳೆಯ ಮಗುವಿನೊಂದಿಗೆ ಮನೆಯಲ್ಲಿ ಮಲಗಿದ್ದ ಸಂದರ್ಭ ಕಳ್ಳರು ಕಿಟಕಿಯ ಮೂಲಕ ಕೈ ತೂರಿಸಿ ಮೊಬೈಲ್ ಫೋನ್‌ನ್ನು ಕದ್ದಿದ್ದು, ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

-ರಂಜಿತ್ ಕವಲಪಾರ