ನಾಪೋಕ್ಲು, ಮಾ. ೩೦: ಇಲ್ಲಿಗೆ ಸಮೀಪದ ಎಮ್ಮೆಮಾಡು ಸೂಫೀ ಶಹೀದ್ ,ಸೈಯ್ಯದ್ ಹಸ್ಸನ್ ಸಖಾಫ್ ಮತ್ತು ಇತರೆ ಸೂಫಿ ಶ್ರೇಷ್ಠರ ಸ್ಮರಣಾತ್ಮ ನಡೆಸಿಕೊಂಡು ಬರುತ್ತಿರುವ ಎಮ್ಮೆಮಾಡು ಉರೂಸ್ ಪ್ರಯುಕ್ತ ನೇರ್ಚೆ ಕುರಿಕ್ಕಲ್ ಕಾರ್ಯಕ್ರಮ ಸೋಮವಾರ ಜರುಗಿತು.
ಆರಂಭದಲ್ಲಿ ಪ್ರಾರ್ಥನೆ ಸಲ್ಲಿಸಿ ದಫ್ ಪ್ರದರ್ಶನ ನಡೆಯಿತು. ನಂತರ ಸೂಫಿ ಶಾಹಿದ್ ದರ್ಗಾ ತೆರಳಿ ದರ್ಗಾಕ್ಕೆ ಜಾರ ಹಾಕಲಾಯಿತು.
ಈ ಸಂದರ್ಭ ಅಧ್ಯಕ್ಷ ಹುಸೈನ್ ಸಖಾಫಿ ಹಾಗೂ ಧರ್ಮ ಗುರುಗಳು ವಿಶೇಷ ಪ್ರಾರ್ಥನೆಯನ್ನು ಮಾಡಿದ ನಂತರ ಮಸೀದಿ ಆವರಣದಲ್ಲಿ ಉರೂಸ್ ಕಾರ್ಯಕ್ರಮಗಳ ಮಾಹಿತಿಯನ್ನು ಅಧಿಕೃತವಾಗಿ ಜಮಾಅತಿನ ಅಧ್ಯಕ್ಷ ಹುಸೈನ್ ಸಖಾಫಿ ಪ್ರಕಟಿಸಿದರು. ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಎಮ್ಮೆಮಾಡು ಉರೂಸ್ ಏಪ್ರಿಲ್ ೧೭ರಿಂದ ೨೪ ರವರೆಗೆ ನಡೆಯಲಿದೆ ಎಂದು ಪ್ರಕಟಿಸಲಾಯಿತು.
ಉರೂಸ್ ಅಂಗವಾಗಿ ಏಪ್ರಿಲ್ ೧೭ ರಂದು ಜುಮಾ ನಮಾಝ್ ಬಳಿಕ ಉರೂಸ್ ಉದ್ಘಾಟನೆ ನೆರವೇರಲಿದೆ .ಸಯ್ಯಿದುಲ್ ಉಲಮಾ ಸಯ್ಯಿದ್ ಜಿಫ್ರಿ ಮುತ್ತು ಕ್ಕೋಯ ತಂಙಳ್ ಮಖಾಂ ಝಿಯಾರತ್ ನಡೆಸುವರು. ಧ್ವಜಾರೋಹಣವನ್ನು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷ ಹುಸೈನ್ ಸಖಾಫಿ ನೆರವೇರಿಸಲಿದ್ದಾರೆ.
ಈ ಸಂದರ್ಭ ಇಸ್ಲಾಂ ಮುಸ್ಲಿಂ ಜಮಾಅತ್‌ನ ಉಪಾಧ್ಯಕ್ಷರಾದ ಮೊಯ್ದು ಮಾಹಿನ್ ಚಂಬಾರAಡ , ಅಬ್ದುಲ್ ರಹಿಮಾನ್, ಪ್ರಧಾನ ಕಾರ್ಯದರ್ಶಿ ಸೈಯ್ಯದ್ ಝಕರಿಯ ಸಅದಿ ಅಲ್ ಐದರೂಸಿ, ಖಜಾಂಜಿ ಅಬ್ದುಲ್ ಮಜೀದ್, ಮುದರ್ರಿಸ್, ಹಂಸ ಸಖಾಫಿ, ಮೇಲ್ಮುರಿ, ಖತೀಬ್ ರಾಝಿಕ್ ಫೈಝಿ ಪಟ್ಟಾಂಬಿ , ಸಹ ಕಾರ್ಯದರ್ಶಿಗಳಾದ ಅಶ್ರಫ್ ಚಂಬಾರAಡ , ಹನೀಫಾ ಎಂ. ಎ, ಸಮಿತಿ ಸದಸ್ಯರು, ಶಹೀದಿಯಾ ಅನಾಥಾಲಯದ ಅಧ್ಯಕ್ಷರು , ಮಾಜಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಊರಿನವರು ಉಪಸ್ಥಿತರಿದ್ದರು.