ಮಡಿಕೇರಿ, ಮಾ.೩೦: ಬಿಟ್ಟಂಗಾಲ ಶ್ರೀ ಮುತ್ತಪ್ಪ ದೇವಸ್ಥಾನದಲ್ಲಿ ಶ್ರೀ ಮುತ್ತಪ್ಪ ತೆರೆ ಮಹೋತ್ಸವ ತಾ.೩೧ ರಂದು (ಇಂದು) ಹಾಗೂ ಏಪ್ರಿಲ್ ೧ ರಂದು ನಡೆಯಲಿದೆ. ೩೪ನೇ ವರ್ಷದ ತೆರೆ ಮಹೋತ್ಸವ ಅಂಗವಾಗಿ ತಾ.೩೧ ರಂದು (ಇಂದು) ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮ, ೭ ಗಂಟೆಗೆ ಧ್ವಜಾರೋಹಣ, ೯ ಗಂಟೆಗೆ ಕಣ್ಣಂಬಾಡಿ ಅಮ್ಮನ ಪೂಜೆ, ರಾತ್ರಿ ೮ ಗಂಟೆಗೆ ಶ್ರೀ ಮುತ್ತಪ್ಪ ವೆಳ್ಳಾಟಂ, ರಾತ್ರ‍್ರಿ ೯ ಗಂಟೆಗೆ ಗುಳಿಗನ ತೋಟ್ಟಂ ತೆರೆ, ರಾತ್ರಿ ೯:೩೦ಕ್ಕೆ ಅನ್ನ ಸಂತರ್ಪಣೆ ಹಾಗೂ ೧೦ ಗಂಟೆಗೆ ಶ್ರೀ ಬಸುರಿಮಲ ದೇವರ ತೋಟ್ಟಂ ತೆರೆ ನಡೆಯಲಿದೆ.

ಏಪ್ರಿಲ್ ೧ ಕ್ಕೆ ಬೆಳಿಗ್ಗೆ ೫ ಗಂಟೆಗೆ ಗುಳಿಗನ ತೆರೆ, ೭ ಗಂಟೆಗೆ ಶ್ರೀ ಮುತ್ತಪ್ಪನ್ ತಿರುವಪ್ಪನ್ ವೆಳ್ಳಾಟಂ, ೯ ಗಂಟೆಗೆ ಶ್ರೀ ಬಸುರಿಮಲ ದೇವರ ತೆರೆ ಹಾಗೂ ಮಧ್ಯಾಹ್ನ ೧೨ ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.