ಗೋಣಿಕೊಪ್ಪಲು, ಮಾ. ೩೦: ದಕ್ಷಿಣ ಕೊಡಗಿನ ಬಾಳೆಲೆಯ ವಿಜಯಲಕ್ಷಿö್ಮ ಜೂನಿಯರ್ ಕಾಲೇಜು ಮೈದಾನದಲ್ಲಿ ಒಲಂಪಿಯನ್ ಬಿ.ಕೆ. ಸುಬ್ರಮಣಿ ಅವರು ಆಯೋಜಿಸಿರುವ ಎರಡನೇ ಆವೃತ್ತಿಯ ಉಚಿತ ಹಾಕಿ ಬೇಸಿಗೆ ಶಿಬಿರವು ಮಾರ್ಚ್ ೫ರಿಂದ ಆರಂಭಗೊಳ್ಳಲಿದ್ದು, ೧೯೮೦ರಲ್ಲಿ ಮಾಸ್ಕೋ ಒಲಂಪಿಕ್ಸ್ನಲ್ಲಿ ಚಿನ್ನ ಗೆದ್ದ ವಿ.ಭಾಸ್ಕರನ್ ಶಿಬಿರ ಉದ್ಘಾಟಿಸಲು ಆಗಮಿಸುತ್ತಿರುವುದು ವಿಶೇಷವಾಗಿದೆ. ಯುವ ಪ್ರತಿಭೆಗಳಲ್ಲಿ ಹಾಕಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಸಲುವಾಗಿ ಒಲಂಪಿಯನ್ ಬಾಳೆಯಡ ಸುಬ್ರಮಣಿಯವರು ಕಳೆದ ವರ್ಷದಿಂದ ಉಚಿತ ಬೇಸಿಗೆ ಶಿಬಿರವನ್ನು ಆಯೋಜಿಸುತ್ತಿದ್ದಾರೆ, ಶಿಬಿರಕ್ಕೆ ಸುತ್ತಮುತ್ತಲಿನ ಗ್ರಾಮದ ಪ್ರತಿಭಾವಂತ ಕ್ರೀಡಾಪಟುಗಳು ಆಗಮಿಸುತ್ತಿದ್ದಾರೆ. ಯುವ ಪ್ರತಿಭೆಗಳಿಗೆ ಒಲಂಪಿಯನ್ ಸುಬ್ರಮಣಿ ಅವರು ಹಾಕಿಯ ತರಬೇತಿ ನೀಡುತ್ತಿರುವುದು ವಿಶೇಷವಾಗಿದೆ.

ವಾಸುದೇವನ್ ಭಾಸ್ಕರನ್ ಅವರು ಭಾರತೀಯ ಹಾಕಿಯಲ್ಲಿ ಖ್ಯಾತಿ ಗಳಿಸಿ ಆದ್ಬುತ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ. ೨೮೭ ಅಂತರರಾಷ್ಟಿçÃಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಭಾಸ್ಕರನ್, ೧೯೮೦ರ ಮಾಸ್ಕೋ ಒಲಂಪಿಕ್ಸ್ನಲ್ಲಿ ಭಾರತ ತಂಡದ ನಾಯಕನಾಗಿ ಮುನ್ನಡೆಸಿ ಚಿನ್ನದ ಪದಕ ಗೆದ್ದಿದ್ದರು