ನಾಪೋಕ್ಲು, ಮಾ.೩೧: ನಾಪೋಕ್ಲು ಶ್ರೀ ಪೊನ್ನು ಮುತ್ತಪ್ಪ ದೇವರ ವಾರ್ಷಿಕ ಉತ್ಸವ ಏಪ್ರಿಲ್ ೩ರಿಂದ ೫ರವರೆಗೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು ಎಂದು ಪೊನ್ನು ಮುತ್ತಪ್ಪ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎ.ಕೆ ಚಂದ್ರನ್ ಹೇಳಿದರು.
ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಾರ್ಷಿಕ ಉತ್ಸವದ ಅಂಗವಾಗಿ ಏಪ್ರಿಲ್ ೩ರಂದು ಶುಕ್ರವಾರ ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮ ಮತ್ತು ಶುದ್ಧ ಕಳಶ ಕೇರಳದ ನೀಲೇಶ್ವರ ಮುರಳಿ ಕೃಷ್ಣ ತಂತ್ರಿಯವರಿAದ ನೆರವೇರಲಿದೆ ಎಂದರು. ಸಂಜೆ ಗುರು ಪೂಜೆ ಹಾಗೂ ಶ್ರೀದೇವಿ ಪೂಜೆ ನಡೆಯಲಿದೆ.
ಏಪ್ರಿಲ್ ೪ರಂದು ಶನಿವಾರ ಮಧ್ಯಾಹ್ನ ೩ ಗಂಟೆಗೆ ಪೈಂಗುತ್ತಿ, ೬ ಗಂಟೆಗೆ ಮುತ್ತಪ್ಪ ದೇವರ ಕಳಶ ಪವಿತ್ರ ಶ್ರೀ ಕಾವೇರಿ ನದಿಯಲ್ಲಿ ಸ್ನಾನದ ನಂತರ ಪ್ರಖ್ಯಾತ ಕೇರಳಚಂಡೆಯೊAದಿಗೆ ಪಟ್ಟಣದ ಮುಖ್ಯಬೀದಿಯಲ್ಲಿ ಸನ್ನಿಧಾನಕ್ಕೆ ಆಗಮಿಸಲಿದೆ. ಸಂಜೆ ೭:೩೦ ಗಂಟೆಗೆ ಮುತ್ತಪ್ಪ ದೇವರ ವೆಳ್ಳಾಟಂ ಬಳಿಕ ೧೦:೩೦ ಗಂಟೆಗೆ ಕುಟ್ಟಿಚಾತ ದೇವರು ಮತ್ತು ಗುಳಿಗ ದೇವರ ವೆಳ್ಳಾಟಂ ನಡೆಯಲಿದೆ.
ಏಪ್ರಿಲ್ ೫ರಂದು ಭಾನುವಾರ ಬೆಳಿಗ್ಗೆ ಗುಳಿಗ ತೆರೆ, ಬಳಿಕ ದೇವರ ಚರಿತ್ರೆ ಹಾಡಿನ ಮೂಲಕ ಹಾಡಿಕೊಂಡು ನೃತ್ಯ, ಬಳಿಕ ಕುಟ್ಟಿಚಾತ ಕೋಲ ಹಾಗೂ ತಿರುವಪ್ಪ ಮತ್ತು ಮುತ್ತಪ್ಪ ಕೊಲಗಳು ಜರುಗಲಿವೆ.
ದೇವಾಲಯದಲ್ಲಿ ಪ್ರತಿ ಶನಿವಾರ ಪೈಂಗುತ್ತಿ ಹಾಗೂ ಪ್ರತಿ ತಿಂಗಳ ೧೫ನೇ ತಾರೀಕಿಗೆ ವೆಳ್ಳಾಟಂ ಜರುಗಲಿದ್ದು ಹೆಚ್ಚಿನ ಮಾಹಿತಿಗೆ ೮೨೭೭೩೬೬೫೬೮, ೯೬೮೬೧೧೦೦೦೬: ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಉಪಾಧ್ಯಕ್ಷ ತಂಗಾ ಎಂ ಕೆ, ಕಾರ್ಯದರ್ಶಿ ಅನಿಲ್ ಪಿ.ಕೆ, ಖಜಾಂಚಿ ಟಿ.ಕೆ ಮಹೇಶ್ ಮೆನನ್, ಸದಸ್ಯರಾದ ಟಿ.ಕೆ ರಘು, ಜಲೇಂದ್ರ, ಉತ್ತಮ್, ಏ ಎಮ್ ಚೇತನ್ , ಟಿ ರಾಜನ್ ಉಪಸ್ಥಿತರಿದ್ದರು.