ಮಡಿಕೇರಿ, ಮಾ. ೩೧: ಕೊಡಗಿನಂತಹ ಪುಟ್ಟ ಜಿಲ್ಲೆಯಲ್ಲಿ ಜನಿಸಿ ದೇಶದ ರಕ್ಷಣಾ ಪಡೆಯಲ್ಲಿ ವಿಶೇಷ ಛಾಪು ಮೂಡಿಸಿರುವ ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರಂತಹ ಧೀಮಂತ ವ್ಯಕ್ತಿಗಳು ಯುವಪೀಳಿಗೆಗೆ ಮೇಲ್ಪಂಕ್ತಿಯಾಗಿದ್ದಾರೆ. ಇವರುಗಳ ಸೇವೆ-ಸಾಧನೆಯನ್ನು ಅರಿತು ಅವರ ಹಾದಿಯಲ್ಲಿ ಯುವಜನಾಂಗ ಸಾಗಬೇಕು. ಕೊಡಗಿನ ಮಣ್ಣಿನಲ್ಲಿ ಇವರಂತಹ ಇನ್ನಷ್ಟು ವ್ಯಕ್ತಿಗಳು ಹುಟ್ಟಿಬರುವಂತಾಗಲಿ ಎಂದು ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಮಡಿಕೇರಿ ಕೊಡವ ಸಮಾಜ ಹಾಗೂ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವತಿಯಿಂದ ಕೊಡವ ಸಮಾಜದ ಸಭಾಂಗಣದಲ್ಲಿ ಇದೇ ಪ್ರಥಮ ಬಾರಿಗೆ ಆಯೋಜಿಸಲಾಗಿದ್ದ ತಿಮ್ಮಯ್ಯ ಸಂಸ್ಮರಣೆಯ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಮುಖರು ಈ ಆಶಾಭಾವನೆ ವ್ಯಕ್ತಪಡಿಸಿದರು.

ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಕೊಡವ ಸಮಾಜ ಹಮ್ಮಿಕೊಂಡ ಕಾರ್ಯಕ್ರಮದ ಬಗ್ಗೆ ಶ್ಲಾಘಿಸಿದರು. ದೇಶದ ಮಹಾನ್ ಸೇನಾನಿಗಳಾಗಿ ಹೆಸರು ಮಾಡಿರುವ ಕಾರ್ಯಪ್ಪ-ತಿಮ್ಮಯ್ಯ ಅವರು ಎಲ್ಲರಿಗೂ ಮಾದರಿಯ ವ್ಯಕ್ತಿಗಳಾಗಿದ್ದಾರೆ. ಇವರ ಆದರ್ಶ, ಶಿಸ್ತು, ಪ್ರಾಮಾಣಿಕತೆ ಎಲ್ಲರಲ್ಲೂ ಬರಬೇಕು ಎಂದು ಅವರು ಹೇಳಿದರು.

ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಇತಿಹಾಸ ಮರೆಯಲಾಗದಂತಹ ವ್ಯಕ್ತಿತ್ವಗಳಲ್ಲಿ ಕಾರ್ಯಪ್ಪ-ತಿಮ್ಮಯ್ಯ ಅವರುಗಳು ಸೇರಿದ್ದಾರೆ. ಇವರ ತ್ಯಾಗ, ಸೇವೆ ಸದಾ ಸ್ಮರಣೀಯ. ಇಂತಹ ಕಾರ್ಯಕ್ರಮಗಳು ಯುವಕರಿಗೆ ಸ್ಫೂರ್ತಿ ಮೂಡಿಸುತ್ತದೆ. ಎಲ್ಲರು ಒಗ್ಗಟ್ಟಾಗಿ ಸಂಸ್ಮರಣಾ ಕಾರ್ಯ ನಡೆಸುವಂತಾಗಬೇಕೆAದರು.

ಮಾಜಿ ಸಚಿವರಾದ ಯಂ.ಸಿ. ನಾಣಯ್ಯ ಮಾತನಾಡಿ, ಈ ಹಿಂದೆ ಸೇನಾನಿಗಳ ಪ್ರತಿಮೆ ಸ್ಥಾಪನೆಯ ಸಂದರ್ಭದ ದಿನಗಳನ್ನು ನೆನಪಿಸಿ ಇತಿಹಾಸದ ವ್ಯಕ್ತಿಗಳ ಪ್ರತಿಮೆಗಳ ಸೂಕ್ತ ನಿರ್ವಹಣೆಯಾಗಬೇಕು. ಜಾತಿ, ಧರ್ಮ ಬೇಧವಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಇಂತಹ ಕಾರ್ಯಕ್ರಮ ಆಯೋಜಿಸುವಂತಾಗಬೇಕು. ಜಿಲ್ಲಾಡಳಿತ ಈ ಬಗ್ಗೆ ಮುತುವರ್ಜಿ ವಹಿಸಬೇಕಿದೆ ಎಂದೂ ಅವರು ಸಲಹೆಯಿತ್ತರು.

ನಿವೃತ್ತ ಲೆ.ಕ. ಮಿಲಿಟರಿ ಕ್ಯಾಂಟೀನ್ ವ್ಯವಸ್ಥಾಪಕ ಮುಲ್ಲೆರ ಕಾವೇರಪ್ಪ ಅವರು ಸೇನಾನಿಯ ಸೇವೆ-ಸಾಧನೆಗಳ ಕುರಿತಾಗಿ ಮಾತನಾಡಿ, ಸಮಯಪ್ರಜ್ಞೆ, ಶಿಸ್ತು, ಪ್ರಾಮಾಣಿಕತೆ ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು.

ಪದ್ಮಶ್ರೀ ಐಮುಡಿಯಂಡ ರಾಣಿ ಮಾಚಯ್ಯ, ವಿಧಾನಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ಕೊಡವ ಸಮಾಜ ಉಪಾಧ್ಯಕ್ಷ ಕೇಕಡ ವಿಜು ದೇವಯ್ಯ, ಕಾರ್ಯದರ್ಶಿ ಬೊಪ್ಪಂಡ ಸರಳಾ ಕರುಂಬಯ್ಯ, ಜಂಟಿ ಕಾರ್ಯದರ್ಶಿ ನಂದಿನೆರವAಡ ದಿನೇಶ್ ಉಪಸ್ಥಿತರಿದ್ದರು. ನಿರ್ದೇಶಕರಾದ ನಂದಿನೆರವAಡ ರವಿಬಸಪ್ಪ, ಮೂವೆರ ಜಯರಾಂ, ಕಾಂಡೆರ ಲಲ್ಲು ಕುಟ್ಟಪ್ಪ, ಕನ್ನಂಡ ಕವಿತ ಬೊಳ್ಳಪ್ಪ, ಕಾಳಚಂಡ ಅಪ್ಪಣ್ಣ, ಶಾಂತೆಯAಡ ವಿಶಾಲ್ ಕಾರ್ಯಪ್ಪ, ಮಂಡಿರ ಸದಾ ಮುದ್ದಪ್ಪ, ಪುತ್ತರಿರ ಕರುಣ್ ಕಾಳಯ್ಯ, ಪೆಮ್ಮುಡಿಯಂಡ ಉತ್ತಪ್ಪ, ಪುಲ್ಲೆರ ವಸಂತ, ಪಾಲೆಯಂಡ ರೂಪ, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಬಾಳೆಯಡ ಸವಿತಾ ಪೂವಯ್ಯ, ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿವರ್ಗ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷೆ ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಮಾಜಿ ಸೈನಿಕ ಸಂಘದ ಪದಾಧಿಕಾರಿಗಳು ಹಾಗೂ ನಿವೃತ್ತ ಸೇನಾನಿಗಳು, ಮಡಿಕೇರಿ ಕೊಡವ ಸಮಾಜದ ಮಾಜಿ ಅಧ್ಯಕ್ಷರಾದ ಕೊಂಗAಡ ದೇವಯ್ಯ, ಮೂವೆರ ಶಂಭು ಸುಬ್ಬಯ್ಯ,ಕೊಡವ ಸಮಾಜದ ಮಾಜಿ ಪದಾಧಿಕಾರಿಗಳು, ಪೊಮ್ಮಕ್ಕಡ ಕೂಟ, ಜಿಲ್ಲಾಡಳಿತ, ಕನ್ನಡ ಸಂಸ್ಕೃತಿ ಇಲಾಖೆ, ಕೊಡವ ವಿದ್ಯಾನಿಧಿ ಸಂಘ, ಸೌಹಾರ್ದ ಸಹಕಾರ ಬ್ಯಾಂಕ್, ಮಡಿಕೇರಿ ಕೊಡವ ಕೇರಿಗಳ ಪದಾಧಿಕಾರಿಗಳು ಹಾಗೂ ಸದಸ್ಯರು, ಕೊಡಗು ವಿದ್ಯಾಲಯ ಶಾಲೆಯ ಎನ್‌ಸಿಸಿ ಪೆರೆಡ್ ತಂಡ, ವಿವಿಧ ಸಂಘ ಸಂಸ್ಥೆಗಳ ಸದಸ್ಯರುಗಳು, ಮಡಿಕೇರಿ ಕೊಡಗು ವಿದ್ಯಾಲಯದ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ತಿಮ್ಮಯ್ಯ ಶಾಲಾ ವಿದ್ಯಾರ್ಥಿಗಳಿಂದ ಉಮ್ಮತಾಟ್ ಪ್ರದರ್ಶನ ನಡೆಯಿತು. ಶಾಲಾ ಮಕ್ಕಳು ಪ್ರಾರ್ಥಿಸಿ, ಮಂಡುವAಡ ಮುತ್ತಪ್ಪ ಸ್ವಾಗತಿಸಿ, ಪಾಂಶುಪಾಲೆ ಬಾಳೆಯಡ ಸವಿತಾ ಪೂವಯ್ಯ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತ್ತು. ಎಲ್ಲರಿಗೂ ಅಪರಾಹ್ನದ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು.