ಚೆಯ್ಯಂಡಾಣೆ, ಮಾ. ೩೧: ಧಾರ್ಮಿಕ ಕೇಂದ್ರಗಳಲ್ಲಿ ಆಚರಿಸಲ್ಪಡುವ ಉರೂಸ್ ಕಾರ್ಯಕ್ರಮ ಸಾಮರಸ್ಯ-ಸೌಹಾರ್ದತೆಗೆ ಮಾದರಿ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್ ಪೊನ್ನಣ್ಣ ಹೇಳಿದರು.
ಸಮೀಪದ ಕುಂಜಿಲ ಗ್ರಾಮದ ಪೈನರಿ ದರ್ಗಾದ ವಾರ್ಷಿಕ ಉರೂಸ್ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಇಲ್ಲಿ ನಡೆಯುವ ವಾರ್ಷಿಕ ಉರೂಸ್ ಕಾರ್ಯಕ್ರಮ ಸೌಹಾರ್ದತೆಯ ಸಂಕೇತವಾಗಿದೆ ಎಂದರು.
ಉರೂಸ್ ಸಮಾರಂಭದಲ್ಲಿ ಪ್ರಖ್ಯಾತ ವಾಗ್ಮಿ ಮೌಲಾನ ಪೇರೋಡ್ ಅಬ್ದುಲ್ ರಹ್ಮನ್ ಸಖಾಫಿ ಮುಖ್ಯ ಪ್ರಭಾಷಣ ನಡೆಸಿ ಕುಂಜಿಲ ಉರೂಸ್ ಸಮಾರಂಭ ಸೌಹಾರ್ದತೆಗೆ ಸಾಕ್ಷಿಯಾಗಿದೆ ಎಂದರು.
ವಿಶ್ವದಾದ್ಯಂತ ಯುದ್ಧ ನಡೆಯುತ್ತಿದೆ, ಆದ್ದದರಿಂದ ನಷ್ಟ ಸಂಭವಿಸುತ್ತಿರುವುದು ನಮಗೆ, ಎಲ್ಲರು ಪರಸ್ಪರ ದ್ವೇಷ ಇಲ್ಲದೆ ಜೀವಿಸಬೇಕು, ಎಲ್ಲಾ ಜಾತಿ ಧರ್ಮದವರು ಪರಸ್ಪರ ಉಪಕಾರ ಮಾಡಬೇಕೆ ಹೊರತು ಉಪದ್ರ ಮಾಡಬಾರದು ಎಂದರು.
ಕುAಜಿಲ ಪೈನರಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಎಂ.ಎ. ಸೌಕತ್ ಅಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಪೈನರಿ ಮಸೀದಿಯ ಮುದರ್ರಿಸ್ ನಿಝಾರ್ ಅಹ್ಸನಿ ಕಕ್ಕಡಿಪುರಂ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಸಕ ಎ.ಎಸ್ ಪೊನ್ನಣ್ಣ ಹಾಗೂ ಪೇರೋಡ್ ಅಬ್ದುಲ್ ರಹ್ಮನ್ ಸಖಾಫಿ ಅವರನ್ನು ಫೈನರಿ ಸುನ್ನೀ ಮುಸ್ಲಿಂ ಜಮಾಅತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ವೇದಿಕೆಯಲ್ಲಿ ಶತಾಯುಷಿ ಹುಸೈನಾರ್ ಹಾಜಿ, ಕೆಪಿಸಿಸಿ ಸದಸ್ಯ ಯಾಕೂಬ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ನಾಪೋಕ್ಲು ಜಮಾಅತ್ ಅಧ್ಯಕ್ಷ ಅಬ್ದುಲ್ ರಹ್ಮಾನ್, ಕೆಎಂಜೆ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹಾಜಿ, ಮರ್ಕಝ್ನ ವ್ಯವಸ್ಥಾಪಕರಾದ ಇಸ್ಮಾಯಿಲ್ ಸಖಾಫಿ, ಜಮಾಅತ್ ಉಪಾಧ್ಯಕ್ಷ ಅಬ್ದುಲ್ ರಹ್ಮನ್, ಕೋಶಾಧಿಕಾರಿ ಕುಂಡAಡ ಹಂಝ, ದರ್ಸ್ ಸಮಿತಿಯ ಅಧ್ಯಕ್ಷ ಹಂಝ ತರಮೇಲ್, ಕಡಂಗ ಬದ್ರಿಯಾ ಜಮಾಅತ್ ಅಧ್ಯಕ್ಷ ಉಸ್ಮಾನ್, ಉದಿಯಂಡ ಸುಭಾಷ್, ಮೇಚಂಡ ಚೇತನ್, ಕೆಡಿಪಿ ಸದಸ್ಯ ಬಾಚಮಂಡ ಲವ ಚಿಣ್ಣಪ್ಪ, ಬೊಳಿಯಾಡಿರ ಸಂತು ಸುಬ್ರಮಣಿ, ಅಂಜಪರವAಡ ಅಭಿನ್ ಚಿಟ್ಟಿಯಪ್ಪ, ಪಾಂಡAಡ ನರೇಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಕುಂಡAಡ ರಝಾಕ್, ಬಶೀರ್ ಪೊಯಕ್ಕರೆ, ಅಬ್ದುಲ್ ರಹ್ಮನ್ ಹಾಜಿ, ಮೊಹಮ್ಮದ್ ಹಾಜಿ, ಹುಸೈನ್ ಹಾಜಿ, ಅಝಿಝ್ ಮಾಸ್ಟರ್, ಜಮಾಅತ್ ಪದಾಧಿಕಾರಿಗಳು, ದರ್ಸ್ ಸಮಿತಿ ಪದಾಧಿಕಾರಿಗಳು, ರಿಲೀಫ್ ಫಂಡ್ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ಉರೂಸ್ ಸಮಾರಂಭದ ಪ್ರಯುಕ್ತ ಮಸೀದಿಯಲ್ಲಿ ಮೌಲೂದ್ ಪಾರಾಯಣ ನಡೆದ ಬಳಿಕ ಸಾವಿರಾರು ಮಂದಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ರಾತ್ರಿ ನವಾಸ್ ಮನ್ನಾನಿ ಪನವೂರ್ ಧಾರ್ಮಿಕ ಮತ ಪ್ರವಚನ ನಡೆಸಿದರು. ಕಾರ್ಯಕ್ರಮದ ಮೊದಲಿಗೆ ಮುದರ್ರಿಸ್ ನಿಝಾರ್ ಅಹ್ಸನಿ ಕಕ್ಕಡಿಪುರಂ ಪ್ರಾರ್ಥಿಸಿ, ಮಾಜಿ ಕಾರ್ಯದರ್ಶಿ ಅಝಿಝ್ ಮಾಸ್ಟರ್ ಸ್ವಾಗತಿಸಿ, ಕಾರ್ಯದರ್ಶಿ ಸಹೀದ್ ಪಯ್ಯಡತ್ ಸರ್ವರನ್ನು ವಂದಿಸಿದರು. - ಅಶ್ರಫ್