ಚೆಯ್ಯಂಡಾಣೆ, ಏ. ೧: ಸ್ಥಳೀಯ ಕೋಕೇರಿ ಗ್ರಾಮದ ಇರ್ಷಾದುಲ್ ಇಸ್ಲಾಂ ಸೆಕೆಂಡರಿ ಮದ್ರಸದಲ್ಲಿ ‘ಅಕ್ಷರ ಲೋಕಕ್ಕೆ ಮೊದಲ ಹೆಜ್ಜೆ’ ಎಂಬ ಫತ್ಹೇ ಮುಬಾರಕ್ ಮದರಸ ಪ್ರಾರಂಭೋತ್ಸವ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜುಮಾಅತ್ ಅಧ್ಯಕ್ಷರಾದ ಬಶೀರ್ ವಹಿಸಿದರು. ಮದ್ರಸ ಅಧ್ಯಾಪಕರಾದ ಅಬ್ದುಲ್ ಖಾದರ್ ಸಅದಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಮದ್ರಸ ಮುಖ್ಯಾಧ್ಯಾಪಕರಾದ ಶಂಸುದ್ದೀನ್ ಅಮ್ಜದಿಯವರು ಒಂದನೇ ತರಗತಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರಂಭ ನಡೆಸಿದರು.
ಈ ಸಂದರ್ಭ ಮಕ್ಕಳ ಪೋಷಕರು, ಊರಿನ ಗಣ್ಯರು, ಆಡಳಿತ ಮಂಡಳಿ ಸದಸ್ಯರುಗಳು ಉಪಸ್ಥಿತರಿದ್ದರು. ಮದ್ರಸ ಅಧ್ಯಾಪಕರಾದ ಅಬ್ದುಲ್ ರಝಾಕ್ ಹಿಮಮಿ ಸ್ವಾಗತಿಸಿ ವಂದಿಸಿದರು.