ನಾಪೋಕ್ಲು, ಏ. ೧: ಫೆಬ್ರವರಿ ತಿಂಗಳಿನಲ್ಲಿ ಹಿಂದೂಪರ ಕಾರ್ಯಕರ್ತ ಅಪ್ಪಚ್ಚಿರ ಗೌತಮ್ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಸೇರಿದಂತೆ ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯವನ್ನು ಖಂಡಿಸಿ ಹಿಂದೂ ಸುರಕ್ಷಾ ಸಮಿತಿ ವತಿಯಿಂದ ನಾಪೋಕ್ಲು ಪಟ್ಟಣದಲ್ಲಿ ಬೃಹತ್ ಹಿಂದೂ ಜನಜಾಗೃತಿ ಸಮಾವೇಶ ಹಾಗೂ ಜಾಥಾ ನಡೆಯಿತು.

ಸಹಸ್ರಾರು ಸಂಖ್ಯೆಯ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿಂದೂತ್ವದ ಕಹಳೆ ಮೊಳಗಿಸಿದರು. ಹಳೇ ತಾಲೂಕಿನಿಂದ ನಾಪೋಕ್ಲು ತನಕ ಕೇಸರಿ ಧ್ವಜ, ಬಂಟಿAಗ್ಸ್, ತೋರಣಗಳು ರಾರಾಜಿಸುತ್ತಿದ್ದವು. ಜಿಲ್ಲೆಯ ವಿವಿಧೆಡೆಗಳಿಂದ ಸಾಗರೋಪಾದಿಯಲ್ಲಿ ನಾಪೋಕ್ಲು ಪಟ್ಟಣಕ್ಕೆ ಹರಿದುಬಂದ ಹಿಂದೂಗಳು ಕೇಸರಿ ಶಾಲು, ಪೇಟ ತೊಟ್ಟು ರಸ್ತೆಯಲ್ಲಿ ಶಿಸ್ತುಬದ್ಧ ಹೆಜ್ಜೆಹಾಕಿದರು. ಪ್ರಮುಖರು ಮೊದಲು ಭಗವತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಹಳೇ ತಾಲೂಕಿನಿಂದ ನಾಪೋಕ್ಲು ಪಟ್ಟಣದ ತನಕ ಕೈಗೊಂಡಿದ್ದ ಬೃಹತ್ ಮೆರವಣಿಗೆಗೆ ಶಿವಚಾಳಿಯಂಡ ಜಗದೀಶ್ ಈಡುಗಾಯಿ ಒಡೆಯುವುದರ ಮೂಲಕ ಚಾಲನೆ ನೀಡಿದರು. ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಜನರು ಹಿಂದೂತ್ವದ ಉಳಿವಿಗಾಗಿ ಘೋಷಣೆಗಳನ್ನು ಕೂಗುತ್ತ ರಸ್ತೆಯಲ್ಲಿ ಸಾಗಿದರು.

೨ ಕಿ.ಮೀ. ಮೆರವಣಿಗೆ

ಹಳೇತಾಲೂಕಿನಿಂದ ನಾಪೋಕ್ಲುವಿನ ಮಾರುಕಟ್ಟೆಯ ತನಕ ೨ ಕಿ.ಮೀ. ನಡೆದ ಮೆರವಣಿಗೆಗೆ ಹಿಂದೂ ಧರ್ಮಿಯರು ಸಾಕ್ಷಿಯಾದರು. ಸುಡುಬಿಸಿಲನ್ನು ಲೆಕ್ಕಿಸದೆ ಮೆರವಣಿಗೆಯುದ್ದಕ್ಕೂ ಮಕ್ಕಳು, ಮಹಿಳೆಯರು, ವೃದ್ಧರು ಉತ್ಸಾಹದಿಂದ ಪಾಲ್ಗೊಂಡರು. ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಕರ್ನಾಟಕ ಪಶ್ಚಿಮ ಘಟ್ಟ ಸಂರಕ್ಷಣಾ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಕಾರ್ಯಪಡೆ ಮಾಜಿ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ ಸೇರಿದಂತೆ ಬಿಜೆಪಿ ಪ್ರಮುಖರು, ಹಿಂದೂ ಪರ ನಾಯಕರು ಕೂಡ ಈ ಸಂದರ್ಭ ಜೊತೆಯಾದರು.

ಬೆಳಿಗ್ಗೆ ೧೧ ಗಂಟೆಯ ವೇಳೆಗೆ ಹಳೇ ತಾಲೂಕಿನಿಂದ ಮೆರವಣಿಗೆ ಆರಂಭಗೊAಡಿತು. ಭಾರತಾಂಬೆಯ ಭಾವಚಿತ್ರವನ್ನು ಹೊತ್ತ ಸ್ತಬ್ಧಚಿತ್ರ ಸಹಿತ ಮೆರವಣಿಗೆ ಮುಖ್ಯರಸ್ತೆಯಲ್ಲಿ ಸಾಗಿತು. ಹಿಂದೂತ್ವ ಉಳಿವಿಗಾಗಿ ಘೋಷಣೆಗಳನ್ನು ಕೂಗುತ್ತ, ಕೈಯಲ್ಲಿ ಭಿತ್ತಿಫಲಕಗಳನ್ನು ಹಿಡಿದು ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಹಿಂದೂ ಸಮಾಜವನ್ನು ಕೆಣಕುವ ಕೆಲಸ

ಹಿಂದೂ ಸಮಾಜವನ್ನು ಕೆಣಕುವ ಕೆಲಸ ದುಷ್ಟಕೂಟಗಳಿಂದ ಆಗುತ್ತಿದೆ ಎಂದು ಹಿಂದೂ ಜಾಗರಣಾ ವೇದಿಕೆ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ್ ಶೆಟ್ಟಿ ಕಾರ್ಕಳ ಆರೋಪಿಸಿದರು.

ದಿಕ್ಸೂಚಿ ಭಾಷಣ ಮಾಡಿದ ಅವರು, ನಾಪೋಕ್ಲು ದೇವತೆಗಳು ನೆಲೆಸಿರುವ ಭೂಮಿ. ಇಗ್ಗುತ್ತಪ್ಪ ಸ್ವಾಮಿಯನ್ನು ಆರಾಧಿಸುವ ನೆಲ. ಈ ಮಣ್ಣಿನ ಮೇಲೆ ಅನೇಕ ಬಾರಿ ದಾಳಿಯಾಗಿದೆ. ಟಿಪ್ಪುಸುಲ್ತಾನ್‌ನಂತಹ ರಾಜನನ್ನೇ ಕೊಡಗಿನ ಧೀರರು ೩೩ ಬಾರಿ ಹಿಮ್ಮೆಟ್ಟಿಸಿದ್ದರು. ಸೋಲು-ಸವಾಲನ್ನು ಮೀರಿ ಇಲ್ಲಿನ ಜನರು ಬಲಶಾಲಿಯಾಗಿದ್ದಾರೆ. ಕಾವೇರಿಯ ತವರುಮನೆ, ಅಗಸ್ತö್ಯನ ತಪೋಭೂಮಿಯಾಗಿರುವ ನಾಪೋಕ್ಲಿನ ಮಣ್ಣಿನಲ್ಲಿ ಹಿಂದೂ ಸಮಾಜವನ್ನೇ ಕೆಣಕುವ ಕೆಲಸವಾಗುತ್ತಿದೆ. ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಮತಾಂಧ ಶಕ್ತಿಗಳಿಗೆ ಕೆಲವರ್ಷಗಳಿಂದ ಭಯಪಡಬೇಕಾದ ಪರಿಸ್ಥಿತಿ ತಲೆದೋರಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕೊಡಗು ನಮ್ಮ ವ್ಯಾಪಾರದ ಭೂಮಿಯಲ್ಲ. ಪುಣ್ಯಭೂಮಿಯಾಗಿದೆ. ಹೊರಗಿನ ಶಕ್ತಿಯಿಂದ ನಾವು ಸೋಲುತ್ತಿಲ್ಲ. ಬದಲಾಗಿ ನಮ್ಮ ಜೊತೆಯಲ್ಲಿದ್ದುಕೊಂಡೇ ನಮ್ಮನ್ನು ಆಂತರಿಕವಾಗಿ ಕುಗ್ಗಿಸುವ ಕೆಲಸ ನಡೆಯುತ್ತಿದೆ. ಸಂಧಾನಕ್ಕೆ ಕರೆದು ಹತ್ಯಾಕಾಂಡ ಮಾಡಿದ ಟಿಪ್ಪು ಸುಲ್ತಾನ್ ವಿಶ್ವಾಸಘಾತುಕತನಕ್ಕೆÀ ಉದಾಹರಣೆಯಾಗಿದ್ದು, ಈ ರೀತಿಯ ಘಟನೆ ಮರುಕಳಿಸದಂತೆ ಹಿಂದೂಗಳು ಜಾಗೃತಿ ವಹಿಸಬೇಕು. ಜಾತಿ ಹೆಸರಿನಲ್ಲಿ ವಿಷಬೀಜ ಬಿತ್ತಿ ವೈಷಮ್ಯ ಮೂಡಿಸುವ ಕೆಲಸವಾಗುತ್ತಿದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ನಾವೆಲ್ಲ ಹಿಂದೂ ಒಂದು ಎಂಬ ಧ್ಯೇಯ ಹೊಂದಬೇಕು. ಹಿಂದೂ ಯುವಕರ ಮೇಲೆ ದಾಳಿ, ಸ್ಥಳೀಯರ ಭೂಮಿ ವಲಸಿಗರ ಕೈ ಸೇರುತ್ತಿದೆ. ಶ್ರದ್ಧಾಕೇಂದ್ರಕ್ಕೆ ಧಕ್ಕೆ ಬರುತ್ತಿದೆ. ಧರ್ಮ, ಸಂಸ್ಕೃತಿ ಉಳಿವಿಗೆ ನಾವು ಕಟಿಬದ್ಧರಾಗಬೇಕು. ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಹಸ್ತಾಂತರಿಸಬೇಕು. ಪ್ರತಿ ಗ್ರಾಮಗಳಲ್ಲಿ ಗ್ರಾಮ ರಕ್ಷಣಾ ಸಮಿತಿ ರಚನೆ ಮಾಡಿ ಹಿಂದೂಗಳ ನೋವು-ನಲಿವಿಗೆ ಸ್ಪಂದಿಸಿ ಬೆಂಗಾವಲಾಗಿ ನಿಲ್ಲಬೇಕು ಎಂದು ಕರೆ ನೀಡಿದರು.

ಪ್ರತಿವರ್ಷ ಜಾಗೃತಿ ಸಮಾವೇಶ

ಅಪ್ಪಚ್ಚಿರ ಗೌತಮ್ ಮೇಲೆ ಹಲ್ಲೆಯಾದ ದಿನವಾದ ಫೆ. ೨೭ ರಂದು ಪ್ರತಿವರ್ಷ ಹಿಂದೂ ಜಾಗೃತಿ ಸಮಾವೇಶವನ್ನು ನಾಪೋಕ್ಲಿನಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಹಿಂದೂ ಸುರಕ್ಷಾ ಸಮಿತಿ ಸಂಚಾಲಕ ಕರವಂಡ ಲವ ನಾಣಯ್ಯ ಘೋಷಿಸಿದರು.

ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಹಿಂದೂಗಳಿಗೆ ಆಗುತ್ತಿರುವ ಅನ್ಯಾಯ, ಹಲ್ಲೆಯ ವಿರುದ್ಧ ಸಮಾವೇಶ ನಡೆಸಲಾಗಿದೆ. ರಾಷ್ಟಿçÃಯ ಸ್ವಯಂ ಸೇವಕ ಸಂಘಕ್ಕೆ ೧೦೦ ವರ್ಷ ತುಂಬಿದ ಹಿನ್ನೆಲೆ ಫೆ. ೨೮ ರಂದು ಬಲ್ಲಮಾವಟಿ ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರ ಪ್ರಚಾರ ಕಾರ್ಯ ನಡೆಯುವ ಸಂದರ್ಭ ಅಪ್ಪಚ್ಚಿರ ಗೌತಮ್ ಮೇಲೆ ಕಿಡಿಗೇಡಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಘಟನೆ ಹಿಂದೂ ಜನರ ಅಸ್ಮಿತೆಗೆ ಬಿದ್ದ ಏಟಾಗಿದ್ದು, ತಕ್ಷಣ ಒಗ್ಗೂಡಿ ರಸ್ತೆ ತಡೆ ನಡೆಸಿ ಸೆಕ್ಷನ್ ೩೦೭ ಅಡಿ ಪ್ರಕರಣ ದಾಖಲಿಸಲು ಒತ್ತಾಯಿಸಿ ಮುತ್ತಿಗೆ ಹಾಕುವ ಎಚ್ಚರಿಕೆ ನಂತರ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು. ಅವರುಗಳಿಗೆ ವಾರದಲ್ಲಿ ಜಾಮೀನು ದೊರೆತಿರುವುದು ನೋವಿನ ವಿಚಾರ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದೂಗಳಿಗೆ ಭದ್ರತೆ ಇಲ್ಲದ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಗೌತಮ್ ಆರೋಗ್ಯ ವಿಚಾರಿಸಲು ತೆರಳಿದ ಶಾಸಕರು, ವಾಹನ ಚಾಲನೆ ವಿಚಾರದಲ್ಲಿ ಗಲಾಟೆ ಏರ್ಪಟ್ಟು ಗಲಭೆ ಆಗಿದೆ ಎಂದು ಪ್ರತಿಕ್ರಿಯಿಸಿದ್ದರು, ಇದು ತನಿಖೆಯ ದಾರಿ ತಪ್ಪಿಸುವ ಹೇಳಿಕೆಯಾಗಿದೆ. ಜಾಮೀನಿನಲ್ಲಿ ಬಿಡುಗಡೆಯಾದ ನಂತರ ಹಿಂಸೆಯನ್ನು ಪ್ರಚೋದಿಸುವಂತಹ ಸಂದೇಶವನ್ನು ಆರೋಪಿಯೋರ್ವ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಕಿಡಿಗೇಡಿ ಕೃತ್ಯ ಎಸಗಿದ್ದಾನೆ. ಇದನ್ನು ವಿರೋಧಿಸುವ ಕೆಲಸವೂ ನಡೆದಿಲ್ಲ. ಬದಲಾಗಿ ಸಮರ್ಥಿಸಿಕೊಳ್ಳುವ ಪ್ರಯತ್ನ ನಡೆದಿದೆ ಎಂದು ಹರಿಹಾಯ್ದರು.

ಇತ್ತೀಚಿನ ದಿನಗಳಲ್ಲಿ ನಾಪೋಕ್ಲು ಭಾಗದಲ್ಲಿ ಈ ರೀತಿಯ ಹೆಚ್ಚಿನ ಘಟನೆ ನಡೆಯುತ್ತಿದೆ. ಪೊಲೀಸರನ್ನೇ ಹೆದರಿಸುವ ಕೆಲಸವಾಗುತ್ತಿದೆ. ಇಲಾಖೆ ಎಚ್ಚೆತ್ತು ಕ್ರಮಕೈಗೊಳ್ಳಬೇಕು. ನಿರ್ಭೀತಿಯಿಂದ ಬದುಕುವ ವಾತಾವರಣ ಸೃಷ್ಟಿಯಾಗಬೇಕು ಎಂದರು.

ನಾಪೋಕ್ಲು ವಿದ್ಯಾಸಂಸ್ಥೆ ಜಾಗವನ್ನು ಕಬಳಿಸುವ ಕೆಲಸವಾಗಿತ್ತು. ಪಟ್ಟಭದ್ರ ಹಿತಾಸಕ್ತಿಗಳಿಂದ ಈ ರೀತಿ ಆಗುತ್ತಿದೆ. ಮತಾಂತರದ ಪಿಡುಗು ಹೆಚ್ಚಾಗುತ್ತಿದೆ. ಹಿಂದೂ ಧರ್ಮ ನಾಶಕ್ಕೆ ದಾಳಿ ನಡೆಯುತ್ತಿದೆ. ಎಲ್ಲಾ ಜಾತಿ ಹಿಂದೂ ಧರ್ಮದ ಬೇರು. ಮುಂದಿನ ಪೀಳಿಗೆ ಶಾಂತಿಯಿAದ ಬಾಳುವಂತಾಗಬೇಕೆAದರು.

ವೇದಿಕೆಯಲ್ಲಿ ಹಿಂದೂ ಜಾಗರಣಾ ವೇದಿಕೆ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಕುಕ್ಕೇರ ಅಜಿತ್, ಹಿಂದೂ ಸುರಕ್ಷಾ ಸಮಿತಿ ಸಹಸಂಚಾಲಕರುಗಳಾದ ಬಿ.ಎಂ. ಪ್ರತೀಪ್, ಬಿ. ರಾಧಾಕೃಷ್ಣ ರೈ ಉಪಸ್ಥಿತರಿದ್ದರು.

ಹೇಮಾ ಅಜಿತ್ ದೇಶಭಕ್ತಿ ಗೀತೆ ಹಾಡಿದರು. ಬೋಜೇಗೌಡ ಸ್ವಾಗತಿಸಿ ಚಂದ್ರ ಉಡೋತ್ ನಿರೂಪಿಸಿ, ಕಂಗಾAಡ ಜಾಲಿ ಪೂವಪ್ಪ ವಂದಿಸಿದರು. ಸರಸ್ವತಿ ಮನೋಹರಿ ವಂದೇ ಮಾತರಂ ಗೀತೆ ಹಾಡಿದರು.

ಹಿಂದುತ್ವದ ರಕ್ಷಣೆಗಾಗಿ ಕೈಜೋಡಿಸುವುದಾಗಿ ಪಾಲ್ಗೊಂಡಿದ್ದ ಸಹಸ್ರಾರು ಸಂಖ್ಯೆಯ ಜನರು ಪ್ರತಿಜ್ಞಾವಿಧಿ ಸ್ವೀಕರಿಸಿ ಸಂಕಲ್ಪ ತೊಟ್ಟರು.

ಹಿಂದೂ ಜಾಗರಣಾ ವೇದಿಕೆ ಕಾರ್ಯಕಾರಿಣಿ ಸದಸ್ಯ ಸುನಿಲ್ ಮಾದಾಪುರ ಪ್ರತಿಜ್ಞಾ ವಿಧಿ ಬೋಧಿಸಿದರು.