ಮಡಿಕೇರಿ, ಏ. ೧: ನಗರದ ಬಾಲಗೋಕುಲದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಶಾಲಾ ವಿದ್ಯಾರ್ಥಿಗಳಿಗಾಗಿ ಸಂಸ್ಕಾರಯುತ "ಬಾಲ ಗೋಕುಲ ಬೇಸಿಗೆ ಶಿಬಿರ"ವನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರವು ತಾ. ೪ ರಿಂದ ೧೨ ರವರೆಗೆ ನಗರದ ಓಂಕಾರೇಶ್ವರ ದೇವಾಲಯದ ಬಳಿ ಇರುವ ಮಧುಕೃಪದಲ್ಲಿ ನಡೆಯಲಿದೆ.
೫ನೇ ತರಗತಿಯಿಂದ ೧೦ನೇ ತರಗತಿಯವರೆಗಿನ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಈ ಶಿಬಿರದಲ್ಲಿ ಭಾಗವಹಿಸಲು ಅವಕಾಶವಿದ್ದು, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
ಶಿಬಿರದಲ್ಲಿ ಮಕ್ಕಳಿಗೆ ಜೀವನ ಶಿಕ್ಷಣ, ನಿತ್ಯ ಶ್ಲೋಕಗಳು ಮತ್ತು ಭಜನೆ, ದೇಶಭಕ್ತಿ ಗೀತೆಗಳು, ಸ್ವಾತಂತ್ರ್ಯ ಹೋರಾಟಗಾರರ ಸ್ಫೂರ್ತಿದಾಯಕ ಕಥೆಗಳು ಹಾಗೂ ಭಗವದ್ಗೀತೆಯ ಶ್ಲೋಕ ಪಠಣವನ್ನು ಕಲಿಸಿಕೊಡ ಲಾಗುವುದು. ಇದರೊಂದಿಗೆ ಮಕ್ಕಳ ಬೌದ್ಧಿಕ ವಿಕಸನಕ್ಕೆ ಪೂರಕವಾದ ರಾಷ್ಟಿçÃಯ ಆಟಗಳನ್ನು ಆಡಿಸಲಾಗುವುದು. ಶಿಬಿರದಲ್ಲಿ ಪಾಲ್ಗೊಳ್ಳುವ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಗುವುದು.
ವಿವರಗಳು
ಪ್ರತಿದಿನ ಮಧ್ಯಾಹ್ನ ೨ ರಿಂದ ಸಂಜೆ ೫ ರವರೆಗೆ ಶಿಬಿರ ನಡೆಯಲಿದೆ. ನೋಂದಣಿಗೆ ತಾ. ೨ ಕೊನೆಯ ದಿನವಾಗಿದ್ದು, ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮತ್ತು ನೋಂದಣಿಗಾಗಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಲು ಕೋರಲಾಗಿದೆ: ೯೪೪೮೫೪೧೩೨೮, ೯೧೪೧೬೭೮೦೪೭.