*ಗೋಣಿಕೊಪ್ಪ, ಏ. ೧: ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಯ ಸಂಕಲ್ಪ ಈಡೇರಿದ ಹಿನ್ನೆಲೆಯಲ್ಲಿ ಯುನೈಟೆಡ್ ಕೊಡವ ಆರ್ಗನೈಸೇಷನ್ - ಯುಕೊ ಸಂಘಟನೆಯ ಸದಸ್ಯರು ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ನೇತೃತ್ವದಲ್ಲಿ ಇಂದು ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಅನ್ನದಾನಕ್ಕೆ ಅಕ್ಕಿ ಹಾಗೂ ದೀಪದ ಎಣ್ಣೆ ದಾನ ನೀಡಿ ಹರಕೆ ಅರ್ಪಿಸಿದರು.

ಸರ್ಕಾರದಿಂದ ನೂತನವಾಗಿ ಕೊಡವ ಅಭಿವೃದ್ಧಿ ನಿಗಮವು ಘೋಷಣೆಯಾಗಿದ್ದು, ಈ ಒಂದು ಪರಿಕಲ್ಪನೆಯನ್ನು ಹುಟ್ಟುಹಾಕಿ, ಇದಕ್ಕಾಗಿ ಕಳೆದ ಒಂದು ದಶಕದಿಂದ ನಿರಂತರ ಪರಿಶ್ರಮಪಟ್ಟಿರುವ ಯುನೈಟೆಡ್ ಕೊಡವ ಆರ್ಗನೈಸೇಷನ್ ಸಂಘಟನೆಯ ಸದಸ್ಯರು ಹಾಗು ಹಿತೈಶಿಗಳು ಇಂದು ಪಾಡಿ ಶ್ರೀ ಇಗ್ಗುತ್ತಪ್ಪ ದೇವಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಕೊಡವ ಅಭಿವೃದ್ಧಿ ನಿಗಮ ಘೋಷಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಮತ್ತು ಈ ಒಂದು ಪರಿಕಲ್ಪನೆಯನ್ನು ಯಶಸ್ಸಿನೆಡೆಗೆ ಮುನ್ನಡೆಸಿದ ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಹಾಗೂ ಸಂಘಟನೆಯ ಹೋರಾಟಕ್ಕೆ ಸ್ಪಂದಿಸಿದ ಎಲ್ಲರಿಗೂ ಒಳಿತಾಗುವಂತೆ ದೇಶ ತಕ್ಕರಾದ ಪರದಂಡ ವಿಠಲ ಕಾವೇರಪ್ಪ ಬೇಡಿಕೊಂಡರು.

ಈ ಸಂದರ್ಭ ಮಾತನಾಡಿದ ಯುಕೊ ಅಧ್ಯಕ್ಷ ಕೊಕ್ಕಲೆಮಾಡಕ್ರೀಡೆ ಶಿಸ್ತು, ಸಂಯಮ, ಸಂಸ್ಕೃತಿಯನ್ನು ಕಲಿಸುತ್ತದೆ ಮಂಜು ಚಿಣ್ಣಪ್ಪ, ಇದೀಗ ಶಾಸಕ ಎ. ಎಸ್. ಪೊನ್ನಣ್ಣ ಅವರ ಪ್ರಭಾವದಿಂದ ಕೊಡವ ಅಭಿವೃದ್ಧಿ ನಿಗಮದ ಬೇಡಿಕೆ ಈಡೇರಿದೆ. ಕೊಡಗು ಕರ್ನಾಟಕದೊಂದಿಗೆ ವಿಲೀನದ ನಂತರದಲ್ಲಿ ಕೊಡವರ ಮಹತ್ವದ ಬೇಡಿಕೆಯೊಂದನ್ನು ಸರ್ಕಾರ ಈಡೇರಿಸಿರುವುದರ ಮೂಲಕ ಹೊಸ ಇತಿಹಾಸ ಸೃಷ್ಟಿಯಾಗಿದೆ ಎಂದು ಹೇಳಿದರು.

ಹಿಂದಿನ ಸರ್ಕಾರ ಹಾಗೂ ಮುಖಂಡರುಗಳು ನೀಡಿದ ಸಹಕಾರವನ್ನೂ ಸ್ಮರಿಸುವುದಾಗಿ ಅವರು ತಿಳಿಸಿದರು.

ದೇಶ ತಕ್ಕ ಪರದಂಡ ವಿಠಲ ಕಾವೇರಪ್ಪ ಮಂಜು ಚಿಣ್ಣಪ್ಪಗೆ ಸ್ಮರಣಿಕೆ ನೀಡಿ ಗೌರವಿಸಿದರು. ಯುಕೊ ಸದಸ್ಯ, ಚೆಪ್ಪುಡಿರ ಸುಜು ಕರುಂಬಯ್ಯ, ನೆಲ್ಲಮಕ್ಕಡ ಜೆಫ್ರಿ ಮಾದಯ್ಯ, ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಅಪ್ಪಾರಂಡ ವೇಣು ಪೊನ್ನಪ್ಪ, ಮಚ್ಚಾಮಾಡ ರಮೇಶ್, ಕಾವಡಿಚಂಡ ದೀಪಕ್ ಉತ್ತಯ್ಯ, ತೀತಿಮಾಡ ಬೋಸ್ ಅಯ್ಯಪ್ಪ, ಪಳಂಗಿಯAಡ ದರ್ಶನ್, ಮುಕ್ಕಾಟಿರ ರಾಬಿನ್, ಚೆಪ್ಪುಡಿರ ಪ್ರತಿಮಾ ಕರುಂಬಯ್ಯ, ಬೊಳ್ಳಚೆಟ್ಟಿರ ಮೈನಾ ಕಾಳಪ್ಪ, ಕುಂಜಿಲAಡ ಗ್ರೇಸಿ ಪೂಣಚ್ಚ, ಪಾಂಡAಡ ಸ್ವಾತಿ ಗಣೇಶ್, ಕಾವಡಿಚಂಡ ಪವಿತ್ರ ಉತ್ತಯ್ಯ, ಮಚ್ಚಾಮಾಡ ರೇಷ್ಮಾ ರಮೇಶ್, ಶ್ರಾವ್ಯ ಗಂಗಮ್ಮ ಉಪಸ್ಥಿತರಿದ್ದರು.