ಮಡಿಕೇರಿ, ಏ. ೧: ನಗರದ ಕೊಡಗು ವಿದ್ಯಾಲಯದಲ್ಲಿ ಸಮಾಗಮ ೨೦೨೬ ವಾರ್ಷಿಕ ಬೇಸಿಗೆ ಶಿಬಿರ ಮತ್ತು ಪಿಕಲ್ ಬಾಲ್ ಕ್ರೀಡಾಂಗಣ ಉದ್ಘಾಟನೆಗೊಂಡಿತು.
ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಆದಿತ್ಯ ಕೋಟೆ, ಡಾ. ಜಾಹ್ನವಿ ಕೋಟೆ, ಕಾರ್ಯದರ್ಶಿ ಪೂಣಚ್ಚ ಬಿ ಎಸ್ ಶಾಲಾ ಆಡಳಿತ ಮಂಡಳಿಯ ಸದಸ್ಯ ಗುರುದತ್ತ್ ಸಿ ಎಸ್, ಪ್ರಾಂಶುಪಾಲೆ ಸುಮಿತ್ರಾ ಕೆ.ಎಸ್., ಆಡಳಿತ ವ್ಯವಸ್ಥಾಪಕ ರವಿ ಪಿ, ಕಲಾ ತರಬೇತುದಾರರಾದ ಪವನ್ ಗಣಪತಿಯ ಕಲಾ ಚಿತ್ರಕ್ಕೆ ಬಣ್ಣ ಹಚ್ಚುವ ಮೂಲಕ ಮತ್ತು ಸಸಿಗೆ ನೀರೆರೆಯುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿ ಡಾ. ಜಾಹ್ನವಿ ಕೋಟೆ ಕೊಡಗು ವಿದ್ಯಾಲಯದಲ್ಲಿನ ತಮ್ಮ ವಿದ್ಯಾಭ್ಯಾಸದ ದಿನಗಳ ನೆನಪುಗಳನ್ನು ಹಂಚಿಕೊAಡು, ವಿದ್ಯಾರ್ಥಿಗಳು ಹೊಸ ವಿಷಯಗಳನ್ನು ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಆದಿತ್ಯ ಕೋಟೆ ಮಾತನಾಡಿ, ಶಾಲಾ ವಿದ್ಯಾಭ್ಯಾಸ ಮತ್ತು ಕ್ರೀಡೆ ಎರಡನ್ನೂ ಸಮತೋಲನದಲ್ಲಿ ಇಟ್ಟುಕೊಳ್ಳುವಂತೆ ಕಿವಿಮಾತು ಹೇಳಿದರು.
ಶಾಲಾ ಆಡಳಿತ ಮಂಡಳಿ ಸದಸ್ಯ ಗುರುದತ್ ಸಿ.ಎಸ್. ಮಾತನಾಡಿ, ಪಿಕಲ್‌ಬಾಲ್ ಕ್ರೀಡಾಂಗಣದ ಸೌಲಭ್ಯ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮಹತ್ವ ಅಪ್ಪಯ್ಯ ನಿರೂಪಿಸಿ,, ಅತಿಥಿಗಳ ಪರಿಚಯವನ್ನು ಆದ್ಯ ಗಂಗಮ್ಮ ನಿರ್ವಹಿಸಿ, ತಾನಿಶ್ ಎನ್.ಜಿ. ವಂದಿಸಿದರು.