ಶ್ರೀಮಂಗಲ, ಮೇ ೩: ಶ್ರೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರ್ಚಿ ಗ್ರಾಮದಲ್ಲಿ ಕಾಡಾನೆಯೊಂದು ಮೃತಪಟ್ಟಿರುವ ಘಟನೆ ನಡೆದಿದೆ.
ಕುರ್ಚಿ ಗ್ರಾಮದ ಕೈ ಮೊಟ್ಟೆ ಎಂಬ ಸ್ಥಳದ ಖಾಸಗಿ ಗದ್ದೆಯಲ್ಲಿ ಗಂಡು ಕಾಡಾನೆ ಮೃತಪಟ್ಟಿದ್ದು, ಈ ಪ್ರದೇಶ ಅರಣ್ಯ ಇಲಾಖೆಯ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ವ್ಯಾಪ್ತಿ ವಿಂಗಡಣೆಯಲ್ಲಿ ಪೊನ್ನಂಪೇಟೆ ಪ್ರಾದೇಶಿಕ ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಡಲಿದ್ದು, ಈ ಹಿನ್ನೆಲೆಯಲ್ಲಿ ಪೊನ್ನಂಪೇಟೆ ವಲಯ ಅರಣ್ಯಧಿಕಾರಿ ಅವರು ಸ್ಥಳಕ್ಕೆ ಭೇಟಿ ನೀಡಿದರು. ಕಾಡಾನೆಯ ಮೈ ಮೇಲೆ ಯಾವುದೇ ಗಾಯ ಕಂಡು ಬಂದಿಲ್ಲ, ಸಾವಿಗೆ ನಿಖರ ಕಾರಣ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ತಿಳಿಯಲಿದೆ. ಸ್ಥಳದಲ್ಲಿಯೇ ಕಾಡಾನೆ ಕಳೇಬರದ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ಪೊನ್ನಂಪೇಟೆ ವಲಯ ಅರಣ್ಯಧಿಕಾರಿ ಗಂಗಾಧರ್ ತಿಳಿಸಿದ್ದಾರೆ.