ವರದಿ : ಚಂದ್ರಮೋಹನ್

ಕುಶಾಲನಗರ, ಮೇ ೩: ಕುಶಾಲನಗರದಲ್ಲಿ ನಿರ್ಮಾಣವಾಗುತ್ತಿರುವ ಕರ್ನಾಟಕ ರಸ್ತೆ ಸಾರಿಗೆ ಘಟಕದ ಕಾಮಗಾರಿ ಶೇ.೯೫ ರಷ್ಟು ಪೂರ್ಣಗೊಂಡಿದ್ದು ಈ ತಿಂಗಳ ಮೂರನೇ ವಾರದ ಒಳಗೆ ಲೋಕಾರ್ಪಣೆಗೊಳ್ಳುವ ನಿರೀಕ್ಷೆಯಲ್ಲಿದೆ.

ಕುಶಾಲನಗರ ಮಡಿಕೇರಿ ರಸ್ತೆಯ ಬಸವನಹಳ್ಳಿ ವ್ಯಾಪ್ತಿಯಲ್ಲಿ ಸುಮಾರು ೪ ಎಕರೆ ಜಾಗದಲ್ಲಿ ಎಂಟು ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕುಶಾಲನಗರ ಘಟಕದ ಕಾಮಗಾರಿ ಕಳೆದ ವರ್ಷ ನಿರಂತರ ಮಳೆ ಮತ್ತು ಸ್ಥಳದಲ್ಲಿದ್ದ ಮರಗಳ ತೆರವು ಕಾರ್ಯ ವಿಳಂಬಗೊAಡ ಹಿನ್ನೆಲೆಯಲ್ಲಿ ಕುಂಟುತ್ತಾ ಸಾಗಿತ್ತು. ಇದೀಗ ನೂತನ ಘಟಕದ ಆಡಳಿತ ವಿಭಾಗದ ಕಚೇರಿ, ಯಾಂತ್ರಿಕೃತ ವಿಭಾಗ ವರ್ಕ್ ಶಾಪ್, ಬಸ್ ರಿಪೇರ್ ಬೇ ಸೇರಿದಂತೆ ಹಲವು ಕಾಮಗಾರಿಗಳು ಪೂರ್ಣಗೊಂಡಿವೆ.

ಘಟಕದ ಆವರಣ ಸುತ್ತಲೂ ಕಾಂಪೌAಡ್ ನಿರ್ಮಾಣ ಕಾಮಗಾರಿ ಸೇರಿದಂತೆ ಸಂಪೂರ್ಣ ಕಟ್ಟಡಗಳಿಗೆ ಬಣ್ಣ ಬಳಿದು ಸಿಂಗಾರಗೊAಡಿರುವ ದೃಶ್ಯ ಕಾಣಬಹುದು. ಇನ್ನುಳಿದಂತೆ ಡೀಸೆಲ್ ಬಂಕ್ ನಿರ್ಮಾಣ ಮತ್ತು ಬಹುತೇಕ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾಮಗಾರಿ ಭರದಿಂದ ಸಾಗುತ್ತಿದೆ. ಅಂದಾಜು ೨೦,೦೦೦ ಲೀಟರ್ ಪ್ರಮಾಣದ ಡೀಸೆಲ್ ಸಂಗ್ರಹ ಮಾಡುವ ೨ ಟ್ಯಾಂಕ್ ನಿರ್ಮಾಣವಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಮೂಲಕ ಹಲವು ಇಲಾಖೆಗಳ ಆಕ್ಷೇಪಣಾ ರಹಿತ ಪತ್ರ ದೊರಕಬೇಕಾಗಿದೆ. ಅಲ್ಲದೆ ಪರಿಸರ ಇಲಾಖೆಯಿಂದ ತ್ಯಾಜ್ಯ ವಿಲೇವಾರಿ ಬಗ್ಗೆ ನಿರಾಕ್ಷೇಪಣಾ ಪತ್ರ ಲಭ್ಯವಾಗಬೇಕಾಗಿದೆ. ಘಟಕಕ್ಕೆ ಅಗತ್ಯವಿರುವ ಯಂತ್ರೋಪಕರಣಗಳು ಇನ್ನಷ್ಟೇ ಬರಬೇಕಾಗಿದೆ. ಅಗತ್ಯವಿರುವ ವಿದ್ಯುತ್ ಸಂಪರ್ಕಕ್ಕೆ ಕೆಲಸ ಕಾರ್ಯ ನಡೆದಿದೆ. ಮೂಲವಾಗಿ ಅರಣ್ಯ ಇಲಾಖೆಗೆ ಸೇರಿದ ಈ ಸ್ಥಳದಲ್ಲಿ ಬೆಳೆದು ನಿಂತಿದ್ದ ಮರಗಳ ತೆರವುಗೊಳಿಸುವ ಕಾರ್ಯ ವಿಳಂಬ ಆಗಿರುವ ಹಿನ್ನೆಲೆಯಲ್ಲಿ ಹಾಗೂ ಕಳೆದ ಸಾಲಿನಲ್ಲಿ ನಿರಂತರ ಆರು ತಿಂಗಳ ಕಾಲ ಮಳೆ ಸುರಿದ ಕಾರಣ ಕಾಮಗಾರಿ ವಿಳಂಬಗೊAಡಿದೆ ಎಂದು ಕಟ್ಟಡ ನಿರ್ಮಾಣ ಉಸ್ತುವಾರಿ ಹೊತ್ತಿರುವ ಇಂಜಿನಿಯರ್ ಪವನ್ ಮತ್ತು ಗುತ್ತಿಗೆದಾರ ಚಂದ್ರೇಗೌಡ ಅವರು ‘ಶಕ್ತಿ’ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಇದೀಗ ನಿಗದಿತ ಅವಧಿ ಮುಗಿದಿದ್ದು ಇನ್ನೆರಡು ವಾರಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಈ ಬಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ, ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತಕ್ಷಣ ಕಾಮಗಾರಿ ಸಂಪೂರ್ಣಗೊಳಿಸುವAತೆ ಸೂಚನೆ ನೀಡಲಾಗಿದೆ. ಮಡಿಕೇರಿಯಲ್ಲಿ ಈ ತಿಂಗಳ ೫ ರಂದು ನಡೆಯುವ ಕೆಡಿಪಿ ಸಭೆಯಲ್ಲಿ ಚರ್ಚಿಸಿ ಉದ್ಘಾಟನೆಗೆ ದಿನಾಂಕ ನಿಗದಿಪಡಿಸಲಾಗುವುದು ಎಂದು ತಿಳಿಸಿದ್ದಾರೆ..

ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂಪಾಷ ಅವರು ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಕ್ಷಣ ಘಟಕವನ್ನು ಲೋಕಾರ್ಪಣೆ ಗೊಳಿಸುವ ಕಾರ್ಯ ನಡೆಯಲಿದೆ ಎಂದು ಶಕ್ತಿಯೊಂದಿಗೆ ಮಾಹಿತಿ ನೀಡಿದರು.

ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಹು ನಿರೀಕ್ಷಿತ ಕುಶಾಲನಗರ ಡಿಪೋ ಶೀಘ್ರದಲ್ಲಿ ಪ್ರಾರಂಭಗೊAಡರೆ ಸಾರಿಗೆ ಸಂಸ್ಥೆಯಿAದ ಹೆಚ್ಚಿನ ಸೌಲಭ್ಯ ದೊರಕುವುದರೊಂದಿಗೆ ಸಾವಿರಾರು ಸಂಖ್ಯೆಯ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಸ್ಥಳೀಯರು ನೂತನ ಘಟಕ ನಿರ್ಮಾಣದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕುಶಾಲನಗರ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಸಾರಿಗೆ ಸೌಕರ್ಯ ಲಭಿಸುವ ನಿರೀಕ್ಷೆ ಇದೆ. ಬಹುನಿರೀಕ್ಷಿತ ಮೈಸೂರು ಕುಶಾಲನಗರ ಚತುಷ್ಪಥ ಹೆದ್ದಾರಿ ಕಾಮಗಾರಿ ಕೂಡ ಬಿರುಸಿನಿಂದ ನಡೆಯುತ್ತಿದೆ. ಆನೆಕಾಡು ಬಳಿ ಇದೇ ಘಟಕದ ಮುಂಭಾಗದಲ್ಲಿ ಕುಶಾಲನಗರ ಮಡಿಕೇರಿ ಹೆದ್ದಾರಿ ರಸ್ತೆಗೆ ಆನೆಕಾಡು ಬಳಿಯೇ ಸಂಪರ್ಕ ಸಿಗಲಿದೆ.

ವಿಭಾಗೀಯ ಕಚೇರಿ ತೆರೆಯುವ ಚಿಂತನೆ : ಅಕ್ರಂಪಾಷ

ಜಿಲ್ಲೆಯಲ್ಲಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಕಚೇರಿ ತೆರೆಯುವ ಚಿಂತನೆ ಹರಿಸಲಾಗಿದೆ ಎಂದು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ತಿಳಿಸಿದ್ದಾರೆ. ೪ ಐದನೇ ಪುಟಕ್ಕೆ

(ಮೊದಲ ಪುಟದಿಂದ) ಭಾನುವಾರ ಕುಶಾಲನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ರಸ್ತೆ ಸಾರಿಗೆ ಸಂಸ್ಥೆಯ ಕುಶಾಲನಗರ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಅವರು ಮಾತನಾಡಿದರು. ನೂತನ ಬಸ್ ಡಿಪೋದಲ್ಲಿ ಎಲೆಕ್ಟ್ರಿಕ್ ಬಸ್‌ಗಳಿಗೆ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಘಟಕದಲ್ಲಿ ಸೋಲಾರ್ ವಿದ್ಯುತ್ ಯೋಜನೆ ರೂಪಿಸಿದೆ.

ಜಿಲ್ಲೆಯ ವೀರಾಜಪೇಟೆ ಬಸ್‌ಸ್ಟಾö್ಯಂಡ್ ಆವರಣದಲ್ಲಿ ನೂತನ ಘಟಕ ನಿರ್ಮಾಣ ಬಗ್ಗೆ ಪ್ರಸ್ತಾವನೆ ಬಂದಿದ್ದು ಸದ್ಯದಲ್ಲೇ ಕಾಮಗಾರಿ ಪ್ರಕ್ರಿಯೆ ಆರಂಭಗೊಳ್ಳಲಿದೆ. ರಾಷ್ಟ್ರೀಯ ಹೆದ್ದಾರಿ ಮತ್ತು ಮೈಸೂರು ಕುಶಾಲನಗರ ಚತುಷ್ಪಥ ರಸ್ತೆ ಕಾಮಗಾರಿ ಪೂರ್ಣಗೊಂಡ ಬೆನ್ನಲ್ಲೇ ಕುಶಾಲನಗರ ಟ್ರಾನ್ಸ್ಪೋರ್ಟ್ ಹಬ್ ಆಗಿ ಪರಿವರ್ತನೆಯಾಗಲಿದೆ ಎಂದ ಅಕ್ರಂಪಾಷ ಅವರು ಕುಶಾಲನಗರ ಬಸ್ ನಿಲ್ದಾಣವನ್ನು ಅಭಿವೃದ್ಧಿಗೊಳಿಸುವ ಪ್ರಸ್ತಾವನೆ ಇದೆ ಎಂದರು.

ಕುಶಾಲನಗರದಲ್ಲಿ ಮುಂದಿನ ದಿನಗಳಲ್ಲಿ ರೀಜನಲ್ ವರ್ಕ್ಶಾಪ್ ನಿರ್ಮಾಣ ಮಾಡುವ ಚಿಂತನೆ ಹರಿಸಲಾಗಿದೆ. ಜಿಲ್ಲೆಗೆ ಹೆಚ್ಚುವರಿ ಹೊಸ ಬಸ್‌ಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಕುಶಾಲನಗರ ನೂತನ ಘಟಕಕ್ಕೆ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಸಿಬ್ಬಂದಿಗಳಿಗೆ ವಸತಿ ಗೃಹ ಸೌಲಭ್ಯ ಕಲ್ಪಿಸುವ ಬಗ್ಗೆ ಕೂಡ ಪ್ರಸ್ತಾವನೆ ಬಂದಿದ್ದು, ಜಿಲ್ಲೆಯ ವ್ಯಾಪ್ತಿಯಲ್ಲಿ ಸಂಸ್ಥೆಯ ಹೆಚ್ಚುವರಿ ಬಸ್ಸುಗಳು ಸಂಚರಿಸಲಿದ್ದು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಾಗುವುದು. ಜಿಲ್ಲೆಯಿಂದ ಹಾಗೂ ಕುಶಾಲನಗರ ಮೂಲಕ ಅಂತರ್ ರಾಜ್ಯ ಬಸ್ ಸಂಚಾರ ವ್ಯವಸ್ಥೆ ಹೆಚ್ಚಿಸಲಾಗುವುದು ಎಂದರು.

ತಲಕಾವೇರಿ-ಭಾಗಮಂಡಲ ಕ್ಷೇತ್ರದಿಂದ ನೆರೆ ಜಿಲ್ಲೆಗಳ ಹಾಗೂ ನೆರೆ ರಾಜ್ಯಗಳ ಧಾರ್ಮಿಕ ಕ್ಷೇತ್ರಗಳಿಗೆ ನೂತನ ಬಸ್ ಮಾರ್ಗಗಳನ್ನು ಕಲ್ಪಿಸಲು ಸಂಸ್ಥೆಯಿAದ ಕ್ರಮ ಕೈಗೊಳ್ಳುವ ಬಗ್ಗೆ ‘ಶಕ್ತಿ’ ವ್ಯವಸ್ಥಾಪಕ ನಿರ್ದೇಶಕರ ಗಮನ ಸೆಳೆದ ಸಂದರ್ಭ ಈ ಸಂಬAಧ ಚಿಂತನೆ ಹರಿಸಲಾಗುವುದು ಎಂದು ಅವರು ಭರವಸೆಯಿತ್ತರು.

ತಾನು ಕೊಡಗು ಜಿಲ್ಲೆಯಲ್ಲಿ ಉಪ ವಿಭಾಗ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಸಂದರ್ಭ ಜಿಲ್ಲೆಯ ಅಭಿವೃದ್ಧಿಯನ್ನು ಗುರಿಯಾಗಿ ಇಟ್ಟುಕೊಂಡು ಹಲವು ಯೋಜನೆಗಳಿಗೆ ಸ್ಥಳ ಮೀಸಲಿರಿಸಿದ್ದು ಇದೀಗ ಜಿಲ್ಲೆಯ ವಿವಿಧಡೆ ಅಭಿವೃದ್ಧಿ ಯೋಜನೆಗಳಿಗೆ ಸಹಕಾರಿಯಾಗುತ್ತಿವೆ ಎಂದು ಸ್ಮರಿಸಿದರು. ಈ ಸಂದರ್ಭ ಕೆಎಸ್‌ಆರ್‌ಟಿಸಿ ಸಂಸ್ಥೆಯ ಪುತ್ತೂರು ವಿಭಾಗದ ಅಧಿಕಾರಿ ಶ್ರೀಹರಿಬಾಬು, ವಿಭಾಗೀಯ ತಾಂತ್ರಿಕ ಅಧಿಕಾರಿ ಜಯ ಶಾಂತಕುಮಾರ್, ವೆಂಕಟೇಶ್ ಕಾರ್ಯಪಾಲಕ ಅಭಿಯಂತರ ರಂಗ ರಾಜ್, ಮಂಜುನಾಥ್ ಗುತ್ತಿಗೆದಾರ ಚಂದ್ರೇಗೌಡ, ಸೈಟ್ ಇಂಜಿನಿಯರ್ ಪವನ್ ಮತ್ತಿತರರು ಇದ್ದರು.