ಕಣಿವೆ, ಮೇ ೩: ಕೊಡಗು ಜಿಲ್ಲೆಯ ಖಾಸಗಿ ಬಸ್ ಮಾಲೀಕರ ಸಂಘದ ನೂತನ ಅಧ್ಯಕ್ಷರಾಗಿ ಕುಶಾಲನಗರದ ಶ್ರೀ ಗುರುರಾಘವೇಂದ್ರ ಬಸ್ ಮಾಲೀಕರಾದ ಬಿ. ಜನಾರ್ಧನ ಪ್ರಭು ಆಯ್ಕೆಯಾಗಿದ್ದಾರೆ.
ಮಡಿಕೇರಿಯ ಈಸ್ಟ್ ಎಂಡ್ ಹೊಟೇಲ್ ಸಭಾಂಗಣದಲ್ಲಿ ನಡೆದ ಆಯ್ಕೆ ಸಭೆಯಲ್ಲಿ ಉಪಾಧ್ಯಕ್ಷರಾಗಿ ಕೆ.ಡಬ್ಲೂö್ಯ ಪೂಣಚ್ಚ, ಖಜಾಂಚಿಯಾಗಿ ವಾಲ್ನೂರಿನ ಎಂ. ಜಯಂತ್ ಕಾರ್ಯದರ್ಶಿಯಾಗಿ ಸುಬ್ರಮಣ್ಯ ಕಿಣಿ ಹಾಗೂ ನಿರ್ದೇಶಕರಾಗಿ ಗೌತಂ ಭೋಜಣ್ಣ, ದಿಲನ್ ಚಂಗಪ್ಪ, ಕೆ.ಪಿ.ಜನಾಧÀðನ, ಡಿ.ಟಿ.ರಾಜೇಶ್, ಕೌಶಿಕ್ ಕಾವೇರಪ್ಪ, ನಯನ ಕುಮಾರ್, ದರ್ಶನ್, ಕೆ.ಎಸ್.ಧನಂಜಯ, ಕೆ. ಉಮೇಶ್, ಗಣೇಶ್ ಹಾಗೂ ನೀಲಣ್ಣ ಆಯ್ಕೆಯಾಗಿದ್ದಾರೆ ಎಂದು ಕಾರ್ಯದರ್ಶಿ ಸುಬ್ರಮಣ್ಯ ತಿಳಿಸಿದ್ದಾರೆ.