ವೀರಾಜಪೇಟೆ, ಮೇ.೪: ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ ತಾ.೫ ರಂದು(ಇAದು) ಕಡಂಗಮರೂರು ಗ್ರಾಮದ ನಾಲ್ಕನೇ ಮೈಲಿನಲ್ಲಿ ನಡೆಯಲಿದೆ.

ವೀರಾಜಪೇಟೆ ತಾಲೂಕಿನ ಕಡಂಗಮರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ಕನೇ ಮೈಲಿಯ ಪಿ.ಪಿ. ಲೋಕೇಶ್ ಅವರ ಕುಟುಂಬ ನೆಲೆಸಿರುವ ಮನೆಯಲ್ಲಿ ೩ನೇ ವರ್ಷದ ದೈವಗಳ ನೇಮೋತ್ಸವ ನಡೆಯಲಿದೆ.

ತಾ.೫ ರಂದು ಸಂಜೆ ದೈವಗಳಿಗೆ ಅಲಂಕಾರ ಸೇವೆ, ಮಹಾಪೂಜೆ, ಚಂಡೆವಾದ್ಯ ನಂತರ ಪಾಷಾಣಮೂರ್ತಿ ದೈವ ಮತ್ತು ಇತರ ದೈವಗಳ ದರ್ಶನ ಬಳಿಕ ಅನ್ನಸಂತರ್ಪಣೆ ಜರುಗಲಿದೆ.

ಅಣ್ಣಪ್ಪ ಪಂಜುರ್ಲಿ ದೈವ ನೇಮ, ವರ್ಣ ಪಂಜುರ್ಲಿ ದೈವ ಮತ್ತು ಪಾಷಾಣಮೂರ್ತಿ ದೈವಗಳ ನೇಮ ನಡೆಯಲಿದೆ. ತಾ.೬ ರಂದು ಬುಧವಾರ ಬೆಳಿಗ್ಗೆ ಗುಳಿಗ ಮತ್ತು ಕೊರಗಜ್ಜ ದೈವಗಳ ನೇಮ ನಡೆಯಲಿದೆ. ದೈವಗಳಿಗೆ ಪ್ರಸಾದ ಅರ್ಪಣೆ, ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಪಿ.ಪಿ. ಲೋಕೇಶ್ ೮೧೦೫೪೦೩೫೦೫ ಅವರನ್ನು ಸಂಪರ್ಕಿಸುವುದು.