ಕಣಿವೆ, ಮೇ ೪: ಕಳೆದ ಬಾರಿ ಬೆಳೆದಿದ್ದ ಶುಂಠಿ ಫಸಲಿಗೆ ಅಂದರೆ ಹಳೆಯ ಶುಂಠಿಗೆ ಇದೀಗ ಮಾರುಕಟ್ಟೆಯಲ್ಲಿ ಒಂದಷ್ಟು ದರ ಏರಿಕೆ ಕಂಡಿದೆ. ಇದರಿಂದಾಗಿ ಶುಂಠಿ ಬೆಳೆಗಾರರು ಸಂತಸಗೊAಡಿದ್ದಾರೆ. ಕಳೆದ ಸುಮಾರು ಆರೇಳು ತಿಂಗಳಿನಿAದಲೂ ೨೬೦೦ರ ಆಸುಪಾಸಿನಲ್ಲಿದ್ದ ಶುಂಠಿ ದರ ಕಳೆದ ಮೂರು ದಿನಗಳಲ್ಲಿ ೫ ಸಾವಿರ ರೂ. ದಾಟಿತ್ತು. ಆದರೆ ಆ ದರ ಮೂರು ದಿನಗಳ ನಂತರ ಇರಲಿಲ್ಲ. ನಾಲ್ಕನೇ ದಿನಕ್ಕೆ ಮತ್ತೆ ಒಂದು ಸಾವಿರದಷ್ಟು ಕುಸಿತ ಕಂಡಿತು. ಹಾಗಾಗಿ ಈ ದರ ಈಗ ೪೨೦೦ ರ ಆಸುಪಾಸಿನಲ್ಲಿದೆ. ಹಳೆಯ ಶುಂಠಿಗೆ ಬೆಲೆ ಹೆಚ್ಚಳ ಆಗಿರುವುದು ಬೆಳೆಗಾರರಿಗೆ ಒಂದಷ್ಟು ಸಮಾಧಾನ ತಂದಿದೆ.

ಇತ್ತೀಚಿಗೆ ಬಾಧಿಸುತ್ತಿರುವ ಬಿಸಿಲ ಧಗೆ ಶುಂಠಿ ಬೆಳೆಗಾರರು ತತ್ತರಿಸುವಂತೆ ಮಾಡುತ್ತಿದೆ.

ಬಹುತೇಕ ಕಡೆಗಳಲ್ಲಿ ರೈತರು ನೀರಾವರಿಗೆ ಅವಲಂಬಿಸಿದ್ದ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕ್ಷೀಣಿಸಿ ಕೊಳವೆ ಬಾವಿಗಳು ಸ್ಥಗಿತಗೊಂಡಿವೆ. ಕೆರೆ -ಕಟ್ಟೆ, ಹಳ್ಳಗಳಲ್ಲಿ ನೀರು ಇಂಗಿ ಹೋಗುತ್ತಿದೆ. ಕಾವೇರಿ ಹಾಗೂ ಹಾರಂಗಿ ನದಿಗಳಲ್ಲಿಯೂ ನೀರಿನ ಹರಿವು ಕ್ಷೀಣಿಸಿದೆ. ಶುಂಠಿ ಬಿತ್ತನೆ ಮಾಡಿದ ಹೊಲ ಗದ್ದೆಗಳಿಗೆ ಯಥೇಚ್ಛವಾಗಿ ನೀರು ಹರಿಸಬೇಕಾದ ಕಾರಣ ಕೊಳವೆ ಬಾವಿಗಳನ್ನು ಅವಲಂಬಿಸಿರುವ ಬೆಳೆಗಾರರು ಈಗ ಪರದಾಡುವಂತಹ ಸ್ಥಿತಿ ಎದುರಾಗುತ್ತಿದೆ.

ಕಳೆದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಮತ್ತೆ ರೈತರು ಹೊಸದಾಗಿ ಲಕ್ಷಾಂತರ ಹೆಕ್ಟೇರ್ ಭೂಮಿಯಲ್ಲಿ ಶುಂಠಿ ಬಿತ್ತನೆ ಕೈಗೊಂಡಿದ್ದಾರೆ. ಇನ್ನೇನು ಮೂರ್ನಾಲ್ಕು ತಿಂಗಳು ಕಳೆಯುವಷ್ಟರಲ್ಲಿ ಕಳೆದ ಮಾರ್ಚ್ನಲ್ಲಿ ಬಿತ್ತನೆ ಆಗಿರುವ ಶುಂಠಿ ಮಾರುಕಟ್ಟೆಗೆ ಸಿದ್ದವಾಗಲಿದೆ. ಆದರೆ ಕಳೆದ ಬಾರಿ ಬೆಳೆದಿರುವ ಶುಂಠಿ ಫಸಲನ್ನು ಉತ್ತಮ ದರದ ನಿರೀಕ್ಷೆಯಲ್ಲಿ ಕಟಾವು ಮಾಡದೇ ಕಾದು ಕುಳಿತಿರುವ ಬೆಳೆಗಾರರಿಗೆ ಈಗಿರುವ ದರ ಏನೇನು ಸಾಲದಾಗಿದೆ.

ಏಕೆಂದರೆ, ಬಿಸಿಲ ಧಗೆಗೆ ಭೂಮಿ ಕಾಯುತ್ತಿರುವ ಕಾರಣ ಭೂಮಿಯೊಳಗಿನ ಶುಂಠಿ ಫಸಲು ಶೀತಾಂಶ ಕಳೆದುಕೊಳ್ಳುತ್ತಿದ್ದು ಇಳುವರಿ ಕುಂಠಿತವಾಗುವ ಅಪಾಯವಿದೆ.