ಕಡಂಗ, ಮೇ ೭: ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯವನ್ನು ಒಳಗೊಂಡ ಗ್ರೀನ್ ಜಿಂಜರ್ ಡೀಲರ್ಸ್ ಚಿಅಸೋಸಿಯೇಷನ್ನ ಮಹಾ ಸಭೆಯು ಪೊನ್ನಂಪೇಟೆಯ ಖಾಸಗಿ ರೆಸಾರ್ಟ್ನಲ್ಲಿ ಇತ್ತೀಚೆಗೆ ನಡೆಯಿತು. ಸಾಬು ಐಯಿಪ್ ಮಹಾಸಭೆಯ ಕುರಿತು ಮಾತನಾಡಿದರು. ಮಶÀÆದ್ ಅವರು ಲೆಕ್ಕಪತ್ರ ಮಂಡಿಸಿದರು. ನೂತನ ಸಾಲಿನ ಅಧ್ಯಕ್ಷರಾಗಿ ಸಾಬು ಐಯಿಪ್, ಪ್ರಧಾನ ಕಾರ್ಯದರ್ಶಿಯಾಗಿ ಬಟ್ಟಕಾಳಂಡ ರಾಜ, ಕೋಶಾಧಿಕಾರಿಯಾಗಿ ಜಾಯ್ ಪಿವಿಜೆ, ಉಪಾಧ್ಯಕ್ಷರಾಗಿ ಜೋಬಿ, ಮೊಹಮ್ಮದ್ ನಹೀಸ್, ಮನು ಕೆಜಿಟಿ, ಜೊತೆ ಕಾರ್ಯದರ್ಶಿಗಳಾಗಿ ಮಶೂದ್, ಜೇಕಬ್, ಬಾಲು ಕುಶಾಲನಗರ ಆಯ್ಕೆಯಾಗಿದ್ದಾರೆ.
ಚುನಾವಣಾ ಉಸ್ತುವಾರಿಯಾಗಿ ವಯನಾಡ್ ಜಿಲ್ಲೆಯ ವ್ಯಾಪಾರಿಗಳ ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ಉಸ್ಮಾನ್ ಕಾರ್ಯನಿರ್ವಹಿಸಿದರು. ಈ ಸಂದರ್ಭ ಕೆಜಿಟಿ ಮನು, ಸುಲೈಮಾನ್ ಸಿ.ಬಿ., ಜಾಕಬ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.