ವೀರಾಜಪೇಟೆ, ಮೇ. ೮: ವೀರಾಜಪೇಟೆಯಲ್ಲಿರುವ ತುಳಸಿ ಮಾರಿಯಮ್ಮ ದೇವಸ್ಥಾನದ ವಾರ್ಷಿಕ ಉತ್ಸವದ ಅಂಗವಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಭೇಟಿ ನೀಡಿದರು. ಬಳಿಕ ದೇವಸ್ಥಾನವಿರುವ ಜಾಗದ ಹಕ್ಕು ಪತ್ರ ಹಸ್ತಾಂತರ ಮಾಡಿದರು.

ಪುರಾತನವಾದ ದೇವಾಲಯಕ್ಕೆ ಈ ಹಿಂದೆ ಹಕ್ಕು ಪತ್ರ ಇಲ್ಲದೆ ಯಾವುದೇ ರೀತಿಯ ದಾಖಲೆಗಳನ್ನು ಸೃಷ್ಟಿಸಲು ಅಸಾಧ್ಯವಾಗಿತ್ತು. ಈ ವಿಷಯವನ್ನು ಕಳೆದ ಸಾಲಿನಲ್ಲಿ ಶಾಸಕರಿಗೆ ದೇವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿದ್ದರು.

ಆ ಸಂದರ್ಭದಲ್ಲಿ ಶಾಸಕರು ತಾನು ಅದಕ್ಕೆ ಬೇಕಾದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದು, ಇದೀಗ ದೇವಸ್ಥಾನಕ್ಕೆ ಅಧಿಕೃತ ಹಕ್ಕು ಪತ್ರವನ್ನು ಹಸ್ತಾಂತರಿಸಿದರು. ಇದೆ ಸಂದರ್ಭ ಶಾಸಕರನ್ನು ದೇವಾಲಯದ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ರಂಜಿ ಪೂಣಚ್ಚ, ತುಳಸಿ ಮಾರಿಯಮ್ಮ ದೇವಸ್ಥಾನದ ಅಧ್ಯಕ್ಷ ಮುರುಗ, ಉಪಾಧ್ಯಕ್ಷರು, ಆಡಳಿತ ಮಂಡಳಿ, ಪುರಸಭೆ ಮಾಜಿ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಪುರಸಭೆ ಮಾಜಿ ಸದಸ್ಯ ರಾಜೇಶ್ ಪದ್ಮನಾಭ, ರಾಫಿ, ಮತೀನ್, ಪಕ್ಷದ ಮುಖಂಡರುಗಳಾದ ಮಹಾದೇವ, ಮಂಜುನಾಥ್, ನಯಾಜ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.