ನಾಪೋಕ್ಲು, ಮೇ.೮: ಗದಗ ಜಿಲ್ಲೆಯ ಪಿಡಿಓ ಮುಕ್ತಮ್ ಹುಸೇನ್ ಕರಡಿಗುಡ್ಡ ಅವರ ಅಕಾಲಿಕ ಅಗಲಿಕೆ ಪ್ರಕರಣದ ಸಮಗ್ರ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿ ಕೊಡಗು ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಪ್ರಮುಖರು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್ ಬೋಸರಾಜು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖರ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷರಾದ ಚಂದ್ರಮೌಳಿ ಹಾಗೂ ಖಜಾಂಚಿ ತಿಮಯ್ಯ, ರಾಜ್ಯ ಪರಿಷತ್ ಸದಸ್ಯರಾದ ನಂಜುAಡಸ್ವಾಮಿ, ಗೌರವಾಧ್ಯಕ್ಷರಾದ ಎಚ್.ಡಿ ಹರೀಶ್ ಹಾಗೂ ನಿಕಟಪೂರ್ವ ಅಧ್ಯಕ್ಷರಾದ ರವೀಶ್ ಹಾಗೂ ಪದಾಧಿಕಾರಿಗಳಾದ ಆಶಾ ಕುಮಾರಿ, ಪೂರ್ಣ ಕುಮಾರ್, ನಂದೀಶ್ ಕುಮಾರ್, ಆಯಿಷ, ಲೋಕೇಶ್ ವಿ.ಜಿ, ಶೋಭಾ ರಾಣಿ ಹಾಗೂ ವಿವಿಧ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.