ಮಡಿಕೇರಿ, ಮೇ ೮: ಶಾಶ್ವತ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲು ಬಂದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಕಾರನ್ನು ತಡೆಯಲು ಕೆಲವು ಬಿಜೆಪಿ ಮುಖಂಡರು ಪ್ರಯತ್ನಿಸಿದ್ದು ಬಿಜೆಪಿಯ ಈ ನಡೆಯನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ತೀವ್ರವಾಗಿ ಖಂಡಿಸಿದ್ದಾರೆ.
ಸುಮಾರು ೧೨೦ ಆದಿವಾಸಿಗಳ ಜೀವನಕ್ಕೆ ಮತ್ತು ಬದುಕಿಗೆ ಆಶ್ರಯವಾಗುವಂತಹ ತೂಗುಸೇತುವೆ ನಿರ್ಮಾಣಕ್ಕೆ ಶಾಸಕ ಡಾ ಮಂತರ್ ಗೌಡ ಅವರ ಕೋರಿಕೆ ಮೇರೆಗೆ ರೂ.೭.೫೦ ಕೋಟಿ ಅನುದಾನವನ್ನು ಕರ್ನಾಟಕ ರಾಜ್ಯದ ಅರಣ್ಯ ಸಚಿವರಾದ ಶ್ರೀ ಈಶ್ವರ ಖಂಡ್ರೆಯವರು ಒದಗಿಸಿದ್ದು ಕಾಮಗಾರಿಗೆ ಚಾಲನೆ ನೀಡಲು ಬಂದಿದ್ದರು. ಈ ಸಂದರ್ಭ ‘ಆನೆ ಮಾನವ ಸಂಘರ್ಷ‘ ವಿಚಾರ ಸಂಬAಧ ಅವರ ಕಾರನ್ನು ತಡೆಯಲು ಕೆಲವು ಬಿಜೆಪಿ ಮುಖಂಡರು ಪ್ರಯತ್ನಿಸಿದ್ದು ಖಂಡನೀಯ ಎಂದಿದ್ದಾರೆ. ಆನೆ ಮಾನವ ಸಂಘರ್ಷ ಇಂದು ನಿನ್ನೆಯದಲ್ಲ. ಅನೇಕ ದಶಕಗಳಿಂದ ಇದೆ. ಈಗಿನ ಶಾಸಕರು ಕಾಳಜಿಯಿಂದ ವನ್ಯಜೀವಿ ಸಂಘರ್ಷ ತಡೆಗೆÀ ವೈಜ್ಞಾನಿಕವಾಗಿ ಕ್ರಮ ಕೈಗೊಳ್ಳಲು ಮುಂದಾಗಿರುವಾಗ ಅವರಿಗೆ ಪ್ರೋತ್ಸಾಹ ನೀಡುವ ಬದಲಿಗೆ ರಾಜಕಾರಣಕ್ಕಾಗಿ ಬಿಜೆಪಿ ಅವರು ತಡೆ ಮಾಡುತ್ತಿದ್ದಾರೆ ಎಂದು ಮೈನಾ ಆರೋಪಿಸಿದ್ದಾರೆ.