ಗೋಣಿಕೊಪ್ಪಲು, ಮೇ ೯: ಗೋಣಿಕೊಪ್ಪ ಸಮೀಪದ ವೀರಾಜಪೇಟೆ ಮುಖ್ಯ ರಸ್ತೆಯ ಕೊಳತ್ತೋಡು - ಬೈಗೋಡು ಬಳಿಯ ಮುರುವಂಡ ಕುಟುಂಬಸ್ಥರ ಐನ್‌ಮನೆಯ ಬಳಿ ತಡರಾತ್ರಿ ವೇಳೆ ಹುಲಿಯೊಂದು ಕಾಣಿಸಿಕೊಂಡಿದ್ದು ಗ್ರಾಮದಲ್ಲಿ ಆತಂಕದ ವಾತಾವರಣ ಮೂಡಿಸಿದೆ. ನಾಗರಿಕರಿಗೆ ಹುಲಿಯ ದರ್ಶನವಾಗುತ್ತಿದ್ದಂತೆಯೇ ವಿಷಯ ತಿಳಿದ ವೀರಾಜಪೇಟೆ ವಲಯದ ಆರ್‌ಎಫ್‌ಒ ಶಿವರಾಮ್ ಡಿಆರ್‌ಎಫ್‌ಒ ಸಂಜಿತ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಹುಲಿಯು ಹಾತೂರು, ಕಂಡAಗಾಲ, ವಿ. ಬಾಡಗ, ಕುಟ್ಟಂದಿ ಭಾಗಕ್ಕೆ ತೆರಳಿರುವ ಮಾಹಿತಿ ತಿಳಿದ ಅರಣ್ಯ ಸಿಬ್ಬಂದಿ ಮುಂಜಾನೆಯಿAದಲೇ ಗ್ರಾಮದಲ್ಲಿ ಗಸ್ತು ನಡೆಸಿದರಾದರೂ ಹುಲಿ ಸಂಚಾರದ ಹೆಜ್ಜೆ ಗುರುತುಗಳು ಕಂಡುಬAದಿಲ್ಲ. ಅರಣ್ಯ ಸಿಬ್ಬಂದಿಗಳು ಹುಲಿಯ ಸಂಚಾರದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ತಿಳಿಸಿದೆ. - ಹೆಚ್.ಕೆ. ಜಗದೀಶ್