ವೀರಾಜಪೇಟೆ, ಮೇ ೧೦: ಕೊಂಡAಗೇರಿ ಗ್ರಾಮದಲ್ಲಿ ಶ್ರೀ ದೇವಿ ವೈದ್ಯಕೀಯ ಕೇಂದ್ರದ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ನಾಗರೀಕರ ಇಂದಿನ ಅವಶ್ಯಕತೆಯಾಗಿದೆ. ಸಮಾಜದ ಬಡ ಜನರಿಗೆ ದುಬಾರಿ ಆಸ್ಪತ್ರೆಗೆ ತೆರಳಿ ವೈದ್ಯಕೀಯ ಚಿಕಿತ್ಸೆ ಹಾಗೂ ತಪಾಸಣೆ ಮಾಡಿಕೊಳ್ಳುವುದು ಕಷ್ಟ ಎಂದು ಮನಗಂಡು, ಸ್ಥಳೀಯ ಜನರ ಅನುಕೂಲತೆಗೆಂದು ಇಂತಹ ಶಿಬಿರಗಳನ್ನು ಏರ್ಪಡಿಸಲಾಗುತ್ತದೆ. ನಾಗರಿಕರು ಇದರ ಸದುಪಯೋಗವನ್ನು ಪಡೆದುಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಕೊಂಡAಗೇರಿ ಪಂಚಾಯಿತಿ ಮಾಜಿ ಸದಸ್ಯ ಅಂದಾಯಿ, ಡಾ. ಅಮೀನ್, ಮಾಜಿ ಸದಸ್ಯರಾದ ಮೂಸಾನ್ ಕೆ. ಎಮ್ ಸಾಧುಲಿ, ನೌಶಾದ್ ಅನಿಫ್ ಮುಂತಾದವರಿದ್ದರು.