ವೀರಾಜಪೇಟೆ, ಮೇ ೧೦: ವೀರಾಜಪೇಟೆ ತಾಲೂಕು ಬೊಳ್ಳುಮಾಡು ಗ್ರಾಮದ ಪಂದ್ಯAಡ ಐನ್‌ಮನೆಯನ್ನು ನೂತನವಾಗಿ ನಿರ್ಮಿಸಲು ಭೂಮಿಪೂಜೆ ನೆರವೇರಿಸಲಾಯಿತು.
ಐನ್‌ಮನೆ ಪ್ರಮುಖರ ಕೋರಿಕೆಯಂತೆ ಶಾಸಕರ ಅನುದಾನ ಹಾಗೂ ವೈಯಕ್ತಿಕ ಅನುದಾನ ನೀಡಲಾಗಿದ್ದು, ಕಾಮಗಾರಿಯನ್ನು ಆರಂಭಿಸಲು ವೀರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಪಂದ್ಯAಡ ಕುಟುಂಬದ ಪಟ್ಟೆದಾರ ಪೆಮ್ಮಯ್ಯ, ಡಾಲ ಪೂವಣ್ಣ, ರವಿ ಮಾದಪ್ಪ, ಸುಬ್ರಮಣಿ, ಅಜ್ಜಿಕುಟ್ಟಿರ ಪೊನ್ನು, ಬಟ್ಟಕಾಳಂಡ ರಾಜ, ಮಂಜುನಾಥ್ ಹಾಗೂ ಪಂದ್ಯAಡ ಕುಟುಂಬಸ್ಥರು ಉಪಸ್ಥಿತರಿದ್ದರು.