ಸಿದ್ದಾಪುರ, ಮೇ ೧೦: ಅರೆಕಾಡು ಗ್ರಾಮದ ಎಂ.ಎಸ್.ಡಿ ಯುವಕ ಸಂಘದ ವತಿಯಿಂದ ಅರೆಕಾಡು ಸರ್ಕಾರಿ ಶಾಲೆಗೆ ಕಬ್ಬಿಣದ ಗೇಟನ್ನು ಕೊಡುಗೆಯಾಗಿ ನೀಡಲಾಯಿತು. ಅರೆಕಾಡು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಗೇಟ್‌ಅನ್ನು ಕೊಡುಗೆಯಾಗಿ ನೀಡಲಾಯಿತು.

ಈ ಸಂದರ್ಭ ಎಂ.ಎಸ್.ಡಿ ಯುವಕ ಸಂಘದ ಅಧ್ಯಕ್ಷ ಮುಸ್ತ್ತಾಫ ಮಾತನಾಡಿ, ನಮ್ಮ ಸಂಘ ಕಳೆದ ಹಲವು ವರ್ಷಗಳಿಂದ ಗ್ರಾಮೀಣ ಕ್ರೀಡಾಕೂಟವನ್ನು ನಡೆಸುತ್ತಾ ಬರುತ್ತಿದೆ ಎಂದು ಹೇಳಿದರು. ಸಂಘಟನೆ ಕ್ರೀಡಾಕೂಟ ಸೇರಿದಂತೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು, ಗ್ರಾಮದ ಮಹಿಳೆಯರಿಗೆ ಮತ್ತು ಪುರುಷರಿಗೆ ಕ್ರೀಡಾಕೂಟದಲ್ಲಿ ಅವಕಾಶ ನೀಡಲಾಗುತ್ತಿದೆ ಎಂದರು.

ಈ ಸಂದರ್ಭ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಪದ್ಮಾವತಿ, ಯುವ ಸಂಘದ ಪ್ರಮುಖರಾದ ಇಸ್ಮಾಯಿಲ್, ಅರ್ಷದ್, ಯೂಸೂಫ್ ಆಲಿ, ನೆಲ್ಲಮಕ್ಕಡ ಪ್ರಕಾಶ್ ಕುಶಾಲಪ್ಪ ಹಾಗೂ ಪದಾಧಿಕಾರಿಗಳು ಮತ್ತು ಇನ್ನಿತರರು ಹಾಜರಿದ್ದರು.