ಕುಶಾಲನಗರ, ಮೇ ೧೦: ಶ್ರೀ ಮಹರ್ಷಿ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕೆ.ಎನ್ ಅಶೋಕ್ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಕುಶಾಲನಗರದ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ನೂತನ ಆಡಳಿತ ಮಂಡಳಿ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಪಿ.ಟಿ ಸುರೇಶ್, ನಿರ್ದೇಶಕರಾಗಿ ಎಂ.ಜಿ ಕರಿಯಪ್ಪ, ಸಿ ಸಿದ್ದಲಿಂಗಯ್ಯ, ವೈ.ಟಿ ಪರಮೇಶ್, ಬಿ.ಎಸ್ ಚಂದನ್ ಕುಮಾರ್ , ಕೆ.ಆರ್ ಕೃಷ್ಣ, ಶ್ರೀನಿವಾಸ್ ಕುಮಾರ್ ಎನ್, ಮಂಜುನಾಥ ಎಸ್ ಎಸ್, ಪಿ ಪಿ ಸುರೇಶ್, ಲಕ್ಷö್ಮಣ ನಾಯಕ, ನಾರಾಯಣ ಸ್ವಾಮಿ, ಮುತ್ತ, ಪಿ ಚೈತ್ರ, ಡಿ ಸೌಂದರ್ಯ, ಶೋಭಾ ಮತ್ತು ಮಮತಾ ಅವರುಗಳು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾ ಅಧಿಕಾರಿ ಆಶಾ ಅವರು ತಿಳಿಸಿದ್ದಾರೆ.