*ಗೋಣಿಕೊಪ್ಪ, ಮೇ ೧೦: ಬುಡಕಟ್ಟು ಸಮುದಾಯದ ರೈತರಿಗೆ ಸಮತೋಲನ ಗೊಬ್ಬರ ಬಳಕೆಯ ಮಹತ್ವದ ಬಗ್ಗೆ ಗೋಣಿಕೊಪ್ಪ ಕೆವಿಕೆಯ ಮಣ್ಣು ವಿಜ್ಞಾನಿ ಡಾ. ಮನೋಹರ್ ಮಾಹಿತಿ ನೀಡಿದರು.

ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ಪರೀಕ್ಷಾ ಕೇಂದ್ರದಿAದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ರೈತರಿಗೆ ವಿಜ್ಞಾನಾಧಾರಿತ ಪೋಷಕಾಂಶ ಮತ್ತು ಇತರೆ ಒಳಿತುಗಳ ನಿರ್ವಹಣೆ ಕುರಿತು ಜಾಗೃತಿ ಮೂಡಿಸಲಾಯಿತು. ೫೦ಕ್ಕೂ ಹೆಚ್ಚು ರೈತರು ಪ್ರಯೋಜನ ಪಡೆದುಕೊಂಡರು.

ಅತಿಯಾದ ಅಥವಾ ಅಸಮತೋಲನ ಗೊಬ್ಬರ ಬಳಕೆಯಿಂದ ಮಣ್ಣಿನ ಪೋಷಕಾಂಶಗಳ ಹರಿವು ಮತ್ತು ನೀರಿನ ಮಾಲಿನ್ಯ ಉಂಟಾಗಿ ಪರಿಸರ ಸಮತೋಲನ ಹಾನಿಯಾಗಬಹುದು ಎಂದು ವಿವರಿಸಲಾಯಿತು.

ಮಣ್ಣು ಪರೀಕ್ಷೆ ಆಧಾರಿತ ಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವುದು, ಪೋಷಕಾಂಶ ನಷ್ಟವನ್ನು ಕಡಿಮೆ ಮಾಡುವುದು ಮತ್ತು ಮಣ್ಣಿನ ಆಮ್ಲೀಯತೆ ಹಾಗೂ ಸೂಕ್ಷö್ಮ ಪೋಷಕಾಂಶ ಕೊರತೆಗಳನ್ನು ತಡೆಯುವ ಬಗ್ಗೆ ರೈತರಿಗೆ ತಿಳಿಸಲಾಯಿತು.

ಗೊಬ್ಬರದ ಅತಿಯಾದ ಬಳಕೆಯಿಂದ ಉಂಟಾಗುವ ಯೂಟ್ರೋಫಿಕೇಶನ್ ಹಾಗೂ ಜೇನು ಹುಳಗಳಂತಹ ಪರಾಗಸ್ಪರ್ಶ ಕೀಟಗಳ ಕುಗ್ಗುವಿಕೆ ಕುರಿತು ವಿವರಿಸಲಾಯಿತು. ಡಾ. ಮೇಘಾ ಭಾಗವಹಿಸಿದ ರೈತರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿದರು.