ಮಡಿಕೇರಿ, ಮೇ ೧೦: ಪ್ರಸಕ್ತ ಸಾಲಿಗೆ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಕಾಲೇಜು, ಕೊಡ್ಲಿಪೇಟೆ, ಹಾಗೂ ಮಹಿಳಾ ಪದವಿ ಪೂರ್ವ ಕಾಲೇಜು ಕುಶಾಲನಗರ ಇಲ್ಲಿನ ಪದವಿಪೂರ್ವ ಕಾಲೇಜು ಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ, ಕನ್ನಡ, ಇಂಗ್ಲಿಷ್, ಹಿಂದಿ, ಭೌತಶಾಸ್ತç, ಜೀವಶಾಸ್ತç, ರಾಸಾಯನಶಾಸ್ತç, ಗಣಿತ, ಇತಿಹಾಸ, ಉರ್ದು, ರಾಜ್ಯಶಾಸ್ತç, ಅರ್ಥಶಾಸ್ತç ಸಮಾಜ ಶಾಸ್ತç, ಲೆಕ್ಕಶಾಸ್ತç, ವ್ಯವಹಾರ ಅಧ್ಯಯನ, ಕಂಪ್ಯೂಟರ್ ವಿಜ್ಞಾನ ಈ ವಿಷಯಗಳಲ್ಲಿ ಪದವಿ ಪಡೆದ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅರ್ಜಿಯೊಂದಿಗೆ ದೃಢೀಕೃತ ದಾಖಲೆಗಳನ್ನು ಮೇ ೧೨ ರಂದು ಸಂಜೆ ೫ ಗಂಟೆಒಳಗೆ ಜಿಲ್ಲಾ ಕಚೇರಿ ಅಲ್ಪಸಂಖ್ಯಾತರ ಕಲ್ಯಾಣ ಮೌಲಾನಾ ಆಜಾದ್ ಭವನ, ಇಲ್ಲಿಗೆ ಸಲ್ಲಿಸಲು ಸೂಚಿಸಿದೆ. ಈ ವಿಷಯಗಳಿಗೆ ಅನುಗುಣವಾಗಿ ಅತಿಥಿ ಉಪನ್ಯಾಸಕರ ಸೇವೆಯನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮೇ ೧೨ ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಮೌಲಾನಾ ಆಜಾದ್ ಭವನ, ಎಫ್‌ಎಂಸಿ ಕಾಲೇಜು ಹತ್ತಿರ, ಮಡಿಕೇರಿ ಕಚೇರಿ ದೂ.ಸಂ.೦೮೨೭೨-೨೨೫೫೨೮ ಮತ್ತು ಪ್ರಾಂಶುಪಾಲರು, ಡಾ. ಎಪಿಜೆ ಅಬ್ದುಲ್ ಕಲಾಂ ಪದವಿಪೂರ್ವ ವಸತಿ ಕಾಲೇಜು, ಕೊಡ್ಲಿಪೇಟೆ ದೂ.ಸಂ. ೭೯೭೫೨೫೧೧೭೯ ಹಾಗೂ ಪ್ರಾಂಶುಪಾಲರು ಮಹಿಳಾ ಪದವಿಪೂರ್ವ ಕಾಲೇಜು, ಕುಶಾಲನಗರ ದೂ.ಸಂ. ೬೩೬೧೮೦೨೦೩೭ ನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿ.ಎಂ. ದಿವಾಕರ ತಿಳಿಸಿದ್ದಾರೆ.