ಸೋಮವಾರಪೇಟೆ, ಮೇ ೧೦: ನಿವೇಶನ ರಹಿತ ಬಡವರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ, ಕರ್ನಾಟಕ ಬಹುಜನ ಕಾರ್ಮಿಕ ಸಂಘಟನೆಯ ನೇತೃತ್ವದಲ್ಲಿ ಕುಂಬೂರು ಗ್ರಾಮದ ಪೈಸಾರಿ ಜಾಗದಲ್ಲಿ ವಸತಿರಹಿತ ಕಾರ್ಮಿಕರು ನಡೆಸುತ್ತಿರುವ ಅಹೋರಾತ್ರಿ ಧರಣಿ ೧೦ ನೇ ದಿನಕ್ಕೆ ಕಾಲಿಟ್ಟಿದೆ.

ಶನಿವಾರ ರಾತ್ರಿ ಸುರಿದ ಮಳೆಯಿಂದ ಧರಣಿ ನಿರತರು ಸಮಸ್ಯೆ ಎದುರಿಸಿದ್ದಾರೆ. ಟಾರ್ಪಲ್ ಹೊದಿಕೆಯ ಶೆಡ್‌ಗೆ ನೀರು ಸಂಗ್ರಹವಾಗಿ, ಮಹಿಳೆಯರು ಮಕ್ಕಳು, ವೃದ್ಧರು ನಿದ್ದೆಗೆಡು ವಂತಾಯಿತು. ಕೆಲವರಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ ಎಂದು ಸಂಘಟನೆಯ ಅಧ್ಯಕ್ಷ ಕೆ. ಮೊಣ್ಣಪ್ಪ ನೋವು ತೋಡಿಕೊಂಡರು. ನಮ್ಮ ಬೇಡಿಕೆಯನ್ನು ಈಡೇರಿಸಲು ಸರ್ಕಾರದ ಮಟ್ಟದಿಂದ ಸ್ಪಂದನ ಸಿಗುತ್ತಿಲ್ಲ. ಏನೇ ಆಡೆತಡೆಗಳು ಬಂದರೂ ಹೋರಾಟ ಮುಂದುವರಿ ಯಲಿದೆ ಎಂದು ಹೇಳಿದರು.