ಮಡಿಕೇರಿ, ಮೇ ೧೧; ಕೊಡಗು ಗೌಡ ಯುವ ವೇದಿಕೆ ವತಿಯಿಂದ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ಕುಟುಂಬ-೨೦೨೬ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕುದುಪಜೆ, ಪೊಡನೊಳನ, ಚಳಂಗಾರು ಕುಟುಂಬ ತಂಡಗಳು ಮುಂದಿನ ಹಂತಕ್ಕೆ ಪ್ರವೇಶಿಸಿವೆ.

ಇಂದು ನಡೆದ ಪಂದ್ಯಾವಳಿಯಲ್ಲಿ ನಿಡ್ಯಮಲೆ ತಂಡ ನಿಗದಿತ ೫ ಓವರ್‌ನಲ್ಲಿ ೩ವಿಕೆಟ್‌ಗೆ ೫೭ ರನ್ ಗಳಿಸಿದರೆ, ಚೆರುಕನ ತಂಡ ೫ ವಿಕೆಟ್ ಕಳೆದುಕೊಂಡು ೩೮ ರನ್ ಗಳಿಸಿ ಸೋಲನುಭವಿಸಿತು. ಚಳಂಗಾರು ತಂಡ ೧ ವಿಕೆಟ್ ನಷ್ಟದಲ್ಲಿ ೬೪ ರನ್ ಗಳಿಸಿದರೆ, ದಂಬೆಕೋಡಿ ಎ ತಂಡ ೪ ವಿಕೆಟ್ ಕಳೆದುಕೊಂಡು ೫೧ ರನ್ ಮಾತ್ರ ಗಳಿಸಿ ಸೋಲನುಭವಿಸಿತು.

ಮತ್ತೊಂದು ಪಂದ್ಯದಲ್ಲಿ ಚಳಂಗಾರು ತಂಡ ೩ ವಿಕೆಟ್‌ಗೆ ೬೪ ರನ್ ಗಳಿಸಿದರೆ, ಪಾಲಾರು ಗುಂಡ್ಯ ತಂಡ ೬ ವಿಕೆಟ್ ಕಳೆದುಕೊಂಡು ೩೪ ರನ್ ಮಾತ್ರ ಗಳಿಸಿ ಸೋಲನುಭವಿಸಿತು. ಪೊಡನೊಳನ ತಂಡ ೩ ವಿಕೆಟ್‌ಗೆ ೬೪ ರನ್ ಗಳಿಸಿದರೆ, ಕುಂಬಗೌಡನ ತಂಡ ೩ ವಿಕೆಟ್ ಕಳೆದುಕೊಂಡು ೩೪ ರನ್ ಮಾತ್ರ ಗಳಿಸಿ ಸೋಲನುಭವಿಸಿತು. ನಿಡ್ಯಮಲೆ ತಂಡ ೪ ವಿಕೆಟ್‌ಗೆ ೪೬ ರನ್ ಗಳಿಸಿದರೆ, ಚಳಂಗಾರು ತಂಡ ೨ ವಿಕೆಟ್ ನಷ್ಟದಲ್ಲಿ ಗುರಿ ತಲಪಿತು. ಪೋರೆಯನ ತಂಡ ೧ ವಿಕೆಟ್‌ಗೆ ೫೧ ರನ್ ಗಳಿಸಿದರೆ, ಕುದುಪಜೆ ಎ ತಂಡ ೨ ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಇನ್ನೊಂದು ಪಂದ್ಯದಲ್ಲಿ ಪೊಡನೊಳನ ತಂಡ ಯಾವದೇ ವಿಕೆಟ್ ನಷ್ಟವಿಲ್ಲದೆ ಭರ್ಜರಿ ೧೦೧ ರನ್ ಕಲೆ ಹಾಕಿತು. ಉತ್ತರವಾಗಿ ಆಡಿದ ಕಾನಡ್ಕ ತಂಡ ೫ ವಿಕೆಟ್ ಕಳೆದುಕೊಂಡು ಕೇವಲ ೩೪ ರನ್ ಮಾತ್ರ ಗಳಿಸಿ ೬೭ ರನ್‌ಗಳ ಅಂತರದಿAದ ಸೋಲನುಭವಿಸಿತು. ಕೋಡಿ ತಂಡ ೧ ವಿಕೆಟ್‌ಗೆ ೪೩ ರನ್ ಗಳಿಸಿದರೆ, ಕುದುಪಜೆ ತಂಡ ೨ ವಿಕೆಟ್ ನಷ್ಟದಲ್ಲಿ ಗುರಿ ತಲಪಿತು.