ಮಡಿಕೇರಿ, ಮೇ ೧೧; ಹತ್ತು ಕುಟುಂಬ ಹದಿನೆಂಟು ಗೊತ್ರದ ಗೌಡ ಜನಾಂಗದ ನಡುವೆ ಕೊಡಗು ಗೌಡ ಯುವ ವೇದಿಕೆ ವತಿಯಿಂದ ಇಲ್ಲಿನ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿರುವ ರಿಂಕ್ ಹಾಕಿ ಮೈದಾನದಲ್ಲಿ ನಡೆಯುತ್ತಿರುವ ಪ್ರಥಮ ವರ್ಷದ ರಿಂಕ್ ಹಾಕಿ ಹಬ್ಬದಲ್ಲಿ ತಾ. ೧೦ರಂದು ನಡೆದ ಪಂದ್ಯಾವಳಿಯಲ್ಲಿ ಪೊನ್ನಚನ, ಮೇರ್ಕಜೆ ಹಾಗೂ ಮರದಾಳು ತಂಡಗಳು ಮುನ್ನಡೆ ಸಾಧಿಸಿವೆ.
ಮೊದಲ ಪಂದ್ಯದಲ್ಲಿ ಕೊಳಂಬೆ ತಂಡದ ವಿರುದ್ಧ ಮರದಾಳು ತಂಡ ೩-೨ ಗೋಲುಗಳ ಅಂತರದಿAದ ಗೆಲುವು ಸಾಧಿಸಿತು. ೨೦ ನಿಮಿಷಗಳ ಪೂರ್ಣಾವಧಿಯಲ್ಲಿ ಎರಡೂ ತಂಡಗಳು ತಲಾ ೧ ಗೋಲು ಬಾರಿಸುವದರೊಂದಿಗೆ ಸಮಬಲ ಸಾಧಿಸಿದವು. ಕೊಳಂಬೆ ಕವನ್ ಹಾಗೂ ಖೇಲೋ ಇಂಡಿಯಾ ಆಟಗಾರ್ತಿ ಮರದಾಳು ಯಶಿಕಾ ಗೋಲು ಬಾರಿಸಿದರು. ನಂತರದ ಟೈ ಬ್ರೇಕರ್‌ನಲ್ಲಿ ಮರದಾಳು ತಂಡ ೩-೨ ಗೋಲುಗಳಿಂದ ಗೆಲುವು ಸಾಧಿಸಿತು.
ಬೊಳ್ಳೂರು ಹಾಗೂ ಕುಲ್ಲಚೆಟ್ಟಿ ತಂಡಗಳ ನಡುವಿನ ಪಂದ್ಯದಲ್ಲಿ ೨ ಗೋಲುಗಳಿಂದ ಸಮಾನಾದ ಹಿನ್ನೆಲೆಯಲ್ಲಿ ಟೈ ಬ್ರೇಕರ್ ನೀಡಲಾಯಿತು. ಬೊಳ್ಳೂರು ದಿಲನ್, ಕುಲ್ಲಚೆಟ್ಟಿ ಪ್ರವೀಣ್ ಗೋಲು ದಾಖಲಿಸಿದ್ದರು. ಟೈ ಬ್ರೇಕರ್‌ನಲ್ಲಿ ಬೊಳ್ಳೂರು ಗೆಲುವು ಸಾಧಿಸಿತು.
ಪೊನ್ನಚನ ಹಾಗೂ ಅಣ್ಣಮಂಡ ತಂಡಗಳ ನಡುವಿನ ಪಂದ್ಯದಲ್ಲಿ ಪೊನ್ನಚನ ತಂಡ ಅಣ್ಣಮಂಡವನ್ನು ೯-೧ ಗೋಲುಗಳ ಭಾರೀ ಅಂತರದಿAದ ಮಣಿಸಿತು. ಪೊನ್ನಚನ ಪರ ಪೂವಣ್ಣ ೩, ಪ್ರಶಾಂತ್ ೨, ಯತೀಶ್, ನಿಶಾಂತ್, ರೊಹಿತ್ ತಲಾ ೧ ಗೋಲು ಬಾರಿಸಿದರು. ಅಣ್ಣಮಂಡ ಪರ ರಾಹುಲ್ ಏಕೈಕ ಗೋಲು ದಾಖಲಿಸಿದರು.
ಉಳುವಾರನ ತಂಡ ಕೊಂಬAಡ ತಂಡವನ್ನು ೩-೧ ಗೋಲಿನಿಂದ ಸೋಲಿಸಿತು. ಉಳುವಾರನ ಪರ ಚೇತು ೨, ದಿಕ್ಷಿತ್ ೧ ಗೋಲು ಬಾರಿಸಿದರೆ, ಕೊಂಬAಡ ಪರ ಸೋನು ಏಕೈಕ ಗೋಲು ದಾಖಲಿಸಿದರು. ಜೈನೀರ ತಂಡ ಪಾರೆಮಜಲು ತಂಡವನ್ನು ೨-೧ ಗೋಲಿನಿಂದ ಸೋಲಿಸಿತು. ಜೈನೀರ ಪರ ಪ್ರಜ್ವಲ್ ೨ ಗೋಲು ಬಾರಿಸಿದರೆ, ಪಾರೆಮಜಲು ನಿಖಿಲ್ ಒಂದು ಗೋಲು ಹೊಡೆದರು. ಮೇರ್ಕಜೆ ತಂಡ ಕುದುಪಜೆ ತಂಡವನ್ನು ೫-೧ ಗೋಲಿನಿಂದ ಸೋಲಿಸಿತು. ಮೇರ್ಕಜೆ ಪರ ರೈಲ್ವೇಸ್ ಆಟಗಾರ ಗಿರೀಶ್ ೨, ಮನೋಜ್ ೨ ಹಾಗೂ ಹಿರಿಯ ಆಟಗಾರ ಸುಗುಣ ೧ ಗೋಲು ಬಾರಿಸಿದರೆ,ಕುದುಪಜೆ ಪರ ಸೋಮಶೇಖರ್ ಏಕೈಕ ಗೋಲು ಹೊಡೆದರು. ಪೊನ್ನಚನ ಹಾಗೂ ಮುಕ್ಕಾಟಿ(ಮರಗೋಡು) ತಂಡಗಳ ನಡುವಿನ ಪಂದ್ಯಾಟದಲ್ಲಿ ಪೊನ್ನಚನ ತಂಡ ೫-೦ ಗೋಲುಗಳ ಅಂತರದಿAದ ಗೆಲುವು ಸಾಧಿಸಿತು. ಜೈನೀರ ಹಾಗೂ ಉಳುವಾರನ ತಂಡಗಳ ನಡುವಿನ ಪಂದ್ಯದಲ್ಲಿ ಜೈನೀರ ತಂಡ ಉಳುವಾರವನ್ನು ೨-೧ಗೋಲುಗಳ ಅಂತರದಿAದ ಮಣಿಸಿತು. ಕೊನೆಯ ಪಂದ್ಯದಲ್ಲಿ ಮೇರ್ಕಜೆ ತಂಡ ಅಯ್ಯೇಟಿ ತಂಡವನ್ನು ಭರ್ಜರಿ ೬-೦ ಗೋಲುಗಳ ಅಂತರದಿAದ ಮಣಿಸಿ ಮುನ್ನಡೆ ಸಾಧಿಸಿತು.