ಮಡಿಕೇರಿ, ಮೇ ೧೧: ಮಡಿಕೇರಿ ನಗರ ಠಾಣೆಯ ವೃತ್ತ ನಿರೀಕ್ಷಕ ಪಿ.ಕೆ. ರಾಜು ಅವರು ಮೈಸೂರಿಗೆ ವರ್ಗಾವಣೆಗೊಂಡಿದ್ದಾರೆ.
ಮೈಸೂರಿನ ನರಸಿಂಹರಾಜ ಪೊಲೀಸ್ ಠಾಣೆಗೆ ರಾಜು ಅವರು ವರ್ಗಾವಣೆಗೊಂಡಿದ್ದು, ತೆರವಾಗಿರುವ ಮಡಿಕೇರಿ ನಗರ ಠಾಣೆಗೆ ಇನ್ನೂ ನೂತನ ಅಧಿಕಾರಿ ನಿಯೋಜನೆಯಾಗಿಲ್ಲ.
ಮಡಿಕೇರಿಯಲ್ಲಿ ೨ ವರ್ಷಗಳ ಕಾಲ ಸಿಪಿಐ ಆಗಿದ್ದ ರಾಜು ಅವರು ಗೋಣಿಕೊಪ್ಪ, ಮೈಸೂರಿನ ಉದಯಗಿರಿ, ಕೆ.ಆರ್. ನಗರದಲ್ಲಿ ಕರ್ತವ್ಯ ನಿರ್ವಹಿಸಿದ್ದರು.