ಕಣಿವೆ, ಮೇ ೧೨: ಗುಡ್ಡೆಹೊಸೂರು ಗ್ರಾಮದಲ್ಲಿ ವಾಸವಿರುವ ವಲಯ ಉಪ ಅರಣ್ಯಾಧಿಕಾರಿ ರಂಜನ್ ಎಂಬವರ ಮನೆಯಂಗಳದಲ್ಲಿ ಬೃಹತ್ ಗಾತ್ರದ ಹಾಗೂ ವಿಚಿತ್ರ ಸ್ವರೂಪದಲ್ಲಿ ಸಿಹಿಗೆಣಸು ಕಂಡುಬAದಿದೆ. ಬರೋಬ್ಬರಿ ಎಂಟು ಕೆ.ಜಿ.ಯಷ್ಟು ತೂಕವಿದ್ದ ಈ ಸಿಹಿಗೆಣಸು ನೋಡುಗರ ಹಲವರ ದೃಷ್ಟಿಯಲ್ಲಿ ನಾನಾ ಅರ್ಥಗಳನ್ನು ಮೂಡಿಸುವಂತಿತ್ತು.
ಸಮೃದ್ಧವಾಗಿ ಬೆಳೆದಿದ್ದ ಈ ಸಿಹಿಗೆಣಸು ಫಸಲು ಅಡ್ಡವಾಗಿ ಹಿಡಿದರೆ ನಂದಿಯ ರೀತಿ ಕಂಡುಬರುತ್ತದೆ.ಉದ್ದಕ್ಕೆ ಎತ್ತಿ ಹಿಡಿದಲ್ಲಿ ನಾಟಿ ಕೋಳಿ ಹುಂಜದ ಕಳೇಬರವನ್ನು ಹೋಲುವ ರೀತಿ ಕಂಡುಬAದರೆ, ಇನ್ನೊಂದೆಡೆ ಯಾವುದೋ ಪ್ರಾಣಿಯೊಂದರ ದೇಹವನ್ನು ಹೋಲುವಂತೆ ಕಾಣುತ್ತಿತ್ತು. ಒಬ್ಬರು ಒಂದೇ ಕೈಯಲ್ಲಿ ಎತ್ತಲು ಅಸಾಧ್ಯವಾದ ರೀತಿಯಲ್ಲಿ ಇದ್ದ ಈ ಸಿಹಿಗೆಣಸನ್ನು ಆನೆಕಾಡು ಅರಣ್ಯ ಸಿಬ್ಬಂದಿಗಳು ತಮ್ಮ ಮನೆಗೆ ಒಯ್ದು ಬೇಯಿಸಿ ತಿಂದು ಖುಷಿಪಟ್ಟರು. ಯಾವುದೇ ರಾಸಾಯನಿಕ ಸೋಕದ ಸ್ವಾಭಾವಿಕವಾಗಿಯೇ ಬೆಳೆದಿದ್ದ ಈ ಸಿಹಿಕೋಸು ಆರೋಗ್ಯವರ್ಧಕ ಎಂದರು ಡಿಆರ್ಎಫ್ಓ ರಂಜನ್ ಪತ್ನಿ ವಿದ್ಯಾ.
- ಮೂರ್ತಿ