ವೀರಾಜಪೇಟೆ, ಮೇ ೧೨: ವೀರಾಜಪೇಟೆಯ ತೆಲುಗರ ಬೀದಿಯ ಇತಿಹಾಸ ಪ್ರಸಿದ್ಧ ಶ್ರೀ ದಕ್ಷಿಣಾ ಮಾರಿಯಮ್ಮ ದೇವಸ್ಥಾನದ ವಾರ್ಷಿಕ ಕರಗ ಮಹೋತ್ಸವ ನಡೆಯಿತು.
ಮಂಗಳವಾರ ಸಂಜೆ ಕರಗ ಆರಾಧನೆ ನಡೆಯಿತು. ಬುಧವಾರ ನಂದಾ ದೀಪಾರತಿ, ತದನಂತರ ಪ್ರಸಾದ ವಿನಿಯೋಗ ನಡೆಯಿತು. ಗುರುವಾರ ಮಧ್ಯಾಹ್ನ ೧೨ ಗಂಟೆಗೆ ದೇವಿಯ ಮಹಾಪೂಜೆ ಹಾಗೂ ಪ್ರಸಾದ ವಿನಿಯೋಗ ನಡೆಯಿತು.
ತಾ. ೮ ರಂದು ಮಧ್ಯಾಹ್ನ ೧ ಗಂಟೆಗೆ ದೇವಿಯ ವಿಶೇಷ ಅಲಂಕಾರ ಪೂಜೆ ಮತ್ತು ಮಹಾಪೂಜೆ ಸಂಜೆ ೭ ಗಂಟೆಗೆ ಮಹಾಪೂಜೆ ತದನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ತಾ. ೯ ರಂದು ಸಂಜೆ ೭ ಗಂಟೆಯಿAದ ೧೧ ಗಂಟೆಯವರೆಗೆ ಕರಗ ವಿಸರ್ಜನಾರಾಧನೆ ಹಾಗೂ ದೇವಿಯ ಮಹಾಪೂಜೆ ಮತ್ತು ಪ್ರಸಾದ ವಿನಿಯೋಗ ನಡೆಯಿತು.