ಮಡಿಕೇರಿ, ಮೇ ೧೨: ಕೊಡವ ಭಾಷಿಕ ಸಮುದಾಯಗಳ ಕೂಟದ ವತಿಯಿಂದ ೨೧ ಕೊಡವ ಭಾಷಿಕ ಜನಾಂಗಳ ನಡುವೆ ಮೊದಲ ವರ್ಷದ ಕ್ರೀಡೋತ್ಸವವನ್ನು ತಾ. ೧೫, ೧೬ ಹಾಗೂ ೧೭ ರಂದು ಮೂರ್ನಾಡಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೂಟದ ಅಧ್ಯಕ್ಷ ಡಾ. ಮೇಚೀರ ಸುಭಾಷ್ ನಾಣಯ್ಯ ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. ೧೫ ರಂದು ಬೆಳಿಗ್ಗೆ ೧೦ ಗಂಟೆಗೆ ಮೂರ್ನಾಡಿನ ಬಾಚೆಟ್ಟಿರ ದಿ. ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ೨೧ ಕೊಡವ ಭಾಷಿಕ ಜನಾಂಗದ ಸಮಾಜದ ಅಧ್ಯಕ್ಷರುಗಳು ಸೇರಿ ಪಂದ್ಯಾಟವನ್ನು ಉದ್ಘಾಟಿಸಲಿದ್ದಾರೆ. ೨೧ ಕೊಡವ ಭಾಷಿಕ ಜನಾಂಗಗಳು ಕ್ರಿಕೆಟ್ ಹಾಗೂ ಹಗ್ಗಜಗ್ಗಾಟ ಪಂದ್ಯಾವಳಿಗೆ ಹೆಸರು ನೋಂದಾಯಿಸಿಕೊAಡಿದ್ದು, ಇದೇ ಮೊದಲ ಬಾರಿಗೆ ಈ ರೀತಿಯ ಪ್ರಯತ್ನವನ್ನು ಕೂಟದಿಂದ ಮಾಡಲಾಗಿದೆ. ತಾ. ೧೫ ರಂದು ಉದ್ಘಾಟನಾ ಕಾರ್ಯಕ್ರಮದ ನಂತರ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡವ ಭಾಷಿಕ ಸಮುದಾಯಗಳ ಕೂಟದ ನಡುವೆ ಕ್ರಿಕೆಟ್ ಪ್ರದರ್ಶನ ಪಂದ್ಯ ಏರ್ಪಡಿಸಲಾಗಿದೆ. ಅನಂತರ ಅಧಿಕೃತ ಪಂದ್ಯಗಳು ಆರಂಭವಾಗಲಿವೆ. ತಾ. ೧೬ ರಂದು ಕ್ರಿಕೆಟ್ ಹಾಗೂ ಹಗ್ಗಜಗ್ಗಾಟ ಪಂದ್ಯ ಮುಂದುವರೆಯಲಿದೆ ಎಂದರು.

ತಾ. ೧೭ ರಂದು ಬೆಳಿಗ್ಗೆ ಬಾಡಗ ನೆಲ್ಲಿಮಾನಿ ಈಶ್ವರ ದೇವಾಲಯದಿಂದ ಮೂರ್ನಾಡು ಮೈದಾನದ ತನಕ ಮೆರಥಾನ್ ಆಯೋಜಿಸಲಾಗಿದೆ. ೧೮ ವರ್ಷ ಮೇಲ್ಪಟ್ಟವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಈ ಕಾರ್ಯಕ್ರಮವನ್ನು ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ ಉದ್ಘಾಟಿಸಲಿದ್ದಾರೆ. ಅಂದು ಫೈನಲ್ ಪಂದ್ಯಾವಳಿ ನಡೆದ ಬಳಿಕ ಸಮಾರೋಪ ಸಮಾರಂಭ ನಡೆಯಲಿದೆ. ಡಾ. ಸುಭಾಷ್ ನಾಣಯ್ಯ ಅಧ್ಯಕ್ಷತೆ ವಹಿಸಲಿದ್ದು, ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ, ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಸಂಸದ ಯದುವೀರ್ ಒಡೆಯರ್, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ, ಕಾಫಿ ಬೆಳೆಗಾರ, ಸಮಾಜ ಸೇವಕ ಕೂಡಂಡ ರಾಜೇಂದ್ರ ಅಯ್ಯಮ್ಮ, ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ, ವೀರಾಜಪೇಟೆ ಕೊಡವ ಸಮಾಜ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್ ಅವರುಗಳು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಕೂಟದ ಗೌರವ ಕಾರ್ಯದರ್ಶಿ ಕೂಡಂಡ ಸಾಬ ಸುಬ್ರಮಣಿ ಮಾತನಾಡಿ, ಕೊಡವ ಭಾಷೆ ಮಾತನಾಡುವ ೨೧ ಮೂಲನಿವಾಸಿಗಳನ್ನು ಒಂದೆಡೆ ಸೇರಿಸುವ ಪ್ರಯತ್ನ ಇದೇ ಮೊದಲ ಬಾರಿಗೆ ನಡೆದಿದ್ದು, ಕಾರ್ಯಕ್ರಮದ ಯಶಸ್ವಿಗೆ ಪ್ರತಿಯೊಬ್ಬರು ಕೈಜೋಡಿಸಬೇಕು. ಕ್ರೀಡಾಕೂಟದೊಂದಿಗೆ ೨೧ ಜನಾಂಗಗಳ ತಲಾ ಒಬ್ಬರು ಸಾಧಕರನ್ನು ಸನ್ಮಾನಿಸಲಾಗುವುದು. ಹೊನ್ನೇಪಂಡ ಲೌಲಿ ಮನು (ಸಹಕಾರಿ ಕ್ಷೇತ್ರ), ಉತ್ತುಕುಟ್ಟಡ ತಿಮ್ಮಯ್ಯ ಉಪ್ಪುಚ (ಜಾನಪದ ತಜ್ಞ), ಕೂಡಂಡ ಎಂ. ಪೆಮ್ಮಯ್ಯ (ಪೊಲೀಸ್ ಸೇವೆ), ಕೋಲೆಯಂಡ ಡಾ. ಮೋಹನ್ ಅಪ್ಪಾಜಿ (ವೈದ್ಯಕೀಯ), ಪವ್ವೇರಂಡ ಮಾಯಮ್ಮ ಗಣಪತಿ (ನಾಟಿ ವೈದ್ಯೆ) ಕಣಿಯಂಡ ಎನ್. ನಾಣಯ್ಯ (ಸಂಘಟನೆ), ಜೋಕೀರ ಸಬಿತ ಉಮೇಶ್ (ವೈದ್ಯಕೀಯ), ಮುಕ್ಕಾಟಿರ ಸಚಿತ್ ಗಣಪತಿ (ವೈಜ್ಞಾನಿಕ), ಮಲೆಯಂಡ ಡಾ. ಅಯ್ಯಪ್ಪ (ಪರಿಸರ ಸಂರಕ್ಷಣೆ), ಕ್ಯಾ. ಬಾಚುರ ಪೂಣಚ್ಚ (ಭಾರತೀಯ ಸೇನೆ), ಇಗ್ಗುಡ ಡಾಲು ಗಣಪತಿ (ಭಾರತೀಯ ಸೇನೆ), ಮೇದರ ಹರೀಶ್ (ಸಾಮಾಜಿಕ), ಬಳಪಂಡ ಪಂಚಮಿ ಬಿದ್ದಪ್ಪ (ಕ್ರೀಡೆ), ಕಾಪಾಳರ ಕಾಳು (ಜನಪದ ಕಲಾವಿದ), ಅರಮನೆಪಾಲೆ ಸುಭಾಷ್ (ಕಾರ್ಗಿಲ್ ವೀರ), ಕೋಲಿಂಡಮಲೆ ಚಿಣ್ಣಪ್ಪ (ಕೊಡವ ಜಾನಪದ ಕಲೆ), ಪೊನ್ನಾಟಿಯಂಡ ಬಿ ತಿಮ್ಮಯ್ಯ (ಅಗ್ನಿಶಾಮಕ ದಳ), ಮಾರಂಗಿ ಮನು (ಕೊಡವ ವಾದ್ಯಗಾರ), ಚೆರ್ಮಂಡ ಅಪ್ಪುಣು ಪೂವಯ್ಯ (ಕೊಡವ ಜಾನಪದ), ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಪುತ್ತಾಮನೆ ಪೂಜ ಶರಣು (ಶೈಕ್ಷಣಿಕ), ಬೊಳ್ಳನಮಂಡ ಉತ್ತಪ್ಪ (ಅಗ್ನಿಶಾಮಕ ದಳ) ಅವರುಗಳನ್ನು ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಕೂಟದ ಉಪಾಧ್ಯಕ್ಷರುಗಳಾದ ಪೊನ್ನೀರ ಗಗನ್, ಕುಡಿಯರ ಬೋಪಯ್ಯ, ಸಹಕಾರ್ಯದರ್ಶಿ ಬಾಳೆಕುಟ್ಟಂಡÀ ಉದಯ್ ಮಾದಪ್ಪ ಉಪಸ್ಥಿತರಿದ್ದರು.