ಮಡಿಕೇರಿ, ಮೇ ೧೨: ರಸ್ತೆ ಕಾಮಗಾರಿಯನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ತಾ. ೧೩ ರಿಂದ ಜೂನ್, ೧೨ ರವರೆಗೆ ಸೋಮವಾರಪೇಟೆ ತಾಲೂಕು-ಬೆಂಗಳೂರು ಜಾಲ್ಸೂರು ರಾಜ್ಯ ಹೆದ್ದಾರಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಸ್.ಜೆ.ಸೋಮಶೇಖರ್ ಆದೇಶಿಸಿದ್ದಾರೆ.
ಸಾರ್ವಜನಿಕರು ಸೋಮವಾರಪೇಟೆ-ಹಾನಗಲ್ಲು-ತಲ್ತಾರಶೆಟ್ಟಳ್ಳಿ-ತಾಕೇರಿ ಮಾರ್ಗ, ಮಾವಿನಕಟ್ಟೆ-ತಲ್ತಾರಶೆಟ್ಟಳಿ ಮಾರ್ಗವಾಗಿ ಬಳಸುವುದು. ಈ ಬಗ್ಗೆ ಸೂಚನಾ ಫಲಕವನ್ನು ಅಳವಡಿಸಲು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್‌ಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.