ಮಡಿಕೇರಿ, ಮೇ ೧೩: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ಕುಟುಂಬ-೨೦೨೬ ಕ್ರಿಕೆಟ್ ಪಂದ್ಯಾವಳಿಯಲ್ಲಿ ಉಳುವಾರನ, ಎಡಿಕೇರಿ ಹಾಗೂ ಕೀಜನ ತಂಡಗಳು ಪ್ರಿ ಕ್ವಾರ್ಟರ್ ಹಂತಕ್ಕೆ ಪ್ರವೇಶಿಸಿವೆ.
ಇಂದು ನಡೆದ ಪಂದ್ಯದಲ್ಲಿ ಅರಂಬೂರು ತಂಡ ನಿಗದಿತ ೫ ಓವರ್ನಲ್ಲಿ ೪ ವಿಕೆಟ್ಗೆ ೪೯ ರನ್ ಗಳಿಸಿದರೆ, ಸೂದನ ತಂಡ ೨ ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಕೊರಿಯನ ತಂಡ ೩ ವಿಕೆಟ್ಗೆ ೨೧ ರನ್ ಗಳಿಸಿದರೆ, ಓಡಿಯನ ತಂಡ ೧.೩ ಓವರ್ನಲ್ಲಿ ೧ ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಕೀಜನ ತಂಡ ೨ ವಿಕೆಟ್ಗೆ ೯೯ ರನ್ ಕಲೆ ಹಾಕಿದರೆ, ಬಾಲಂಬಿ ತಂಡ ೪ ವಿಕೆಟ್ ಕಳೆದುಕೊಂಡು ೩೨ ರನ್ ಮಾತ್ರ ಗಳಿಸಿ ೬೭ ರನ್ಗಳ ಅಂತರದಿAದ ಸೋಲನುಭವಿಸಿತು.
ಕುಟ್ಟನ ತಂಡ ೪ ವಿಕೆಟ್ಗೆ ೪೧ ರನ್ ಗಳಿಸಿದರೆ, ಪಾರೆಮಜಲು ತಂಡ ೪ ವಿಕೆಟ್ಗೆ ೩೬ ರನ್ ಮಾತ್ರ ಗಳಿಸಿ ಸೋಲನುಭವಿಸಿತು. ಸೂದನ ತಂಡ ೪ ವಿಕೆಟ್ಗೆ ೩೧ ರನ್ ಗಳಿಸಿದರೆ, ಕಟ್ಟೆಮನೆ ತಂಡ ೩ ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಎಡಿಕೇರಿ ತಂಡ ೩ ವಿಕೆಟ್ಗೆ ೩೬ ರನ್ ಗಳಿಸಿದರೆ, ಓಡಿಯನ ತಂಡ ೨ ವಿಕೆಟ್ ಕಳೆದುಕೊಂಡು ೩ ರನ್ಗಳ ಅಂತರದಿAದ ಸೋಲನುಭವಿಸಿತು.
ಚಳಂಗಾರು ತಂಡ ೮ ವಿಕೆಟ್ಗೆ ೪೪ ರನ್ ಗಳಿಸಿದರೆ, ಕೀಜನ ತಂಡ ೫ ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಪೊಡನೋಳನ ತಂಡ ೩ ವಿಕೆಟ್ಗೆ ೭೦ ರನ್ ದಾಖಲಿಸಿತು. ಉತ್ತರವಾಗಿ ಆಡಿದ ಕಟ್ಟೆಮನೆ ತಂಡ ೭ ವಿಕೆಟ್ ಕಳೆದುಕೊಂಡು ಕೇವಲ ೨೬ ರನ್ ಮಾತ್ರ ಗಳಿಸಿ ೪೪ ರನ್ಗಳ ಅಂತರದಿAದ ಸೊಲನುಭವಿಸಿತು. ಮತ್ತೊಂದು ಪಂದ್ಯದಲ್ಲಿ ಎಡಿಕೇರಿ ತಂಡ ೧ ವಿಕೆಟ್ಗೆ ೭೩ ರನ್ ಗಳಿಸಿದರೆ, ಕುಲ್ಲಚೆಟ್ಟಿರ ತಂಡ ೭ ವಿಕೆಟ್ ಕಳೆದುಕೊಂಡು ೪೭ ರನ್ ಮಾತ್ರ ಗಳಿಸಿ ಸೋಲನುಭವಿಸಿತು. ಕುಟ್ಟನ ತಂಡ ೬ ವಿಕೆಟ್ಗೆ ಕೇವಲ ೧೪ ರನ್ ಮಾತ್ರ ಗಳಿಸಿತು. ಉಳುವಾರನ ತಂಡ ಯಾವದೇ ವಿಕೆಟ್ ನಷ್ಟವಿಲ್ಲದೆ ಗುರಿ ಸಾಧಿಸಿತು. ನಂತರದ ಪಂದ್ಯದಲ್ಲಿ ಪೊಡನೋಳನ ೬ ವಿಕೆಟ್ಗೆ ೪೬ ರನ್ ಗಳಿಸಿದರೆ, ಎಡಿಕೇರಿ ತಂಡ ೨ ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು.