ಮಡಿಕೇರಿ, ಮೇ ೧೪; ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗದ ನಡುವೆ ಕೊಡಗು ಗೌಡ ಯುವ ವೇದಿಕೆ ವತಿಯಿಂದ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿರುವ ರಿಂಕ್ ಹಾಕಿ ಮೈದಾನದಲ್ಲಿ ನಡೆಯುತ್ತಿರುವ ರಿಂಕ್ ಹಾಕಿ ಹಬ್ಬದ ತಾ.೧೩ರಂದು ನಡೆದ ಪಂದ್ಯಾವಳಿಯಲ್ಲಿ ಕಲ್ಲುಮುಟ್ಲು ಹಾಗೂ ಕುಂಬನ ತಂಡಗಳು ಗೆಲುವು ಸಾಧಿಸಿವೆ.

ಕುಟ್ಟನ ಹಾಗೂ ಬಾಳಾಡಿ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಕುಟ್ಟನ ತಂಡ ೩-೨ ಗೋಲುಗಳ ಅಂತರದಿAದ ಗೆಲುವು ಸಾಧಿಸಿತು. ಕುಟ್ಟನ ಪರ ಮದನ್ ಹ್ಯಾಟ್ರಿಕ್ ಗೋಲು ಬಾರಿಸಿದರೆ, ಬಾಳಾಡಿ ಪರ ಅನಿಲ್ ೨ ಗೋಲು ಬಾರಿಸಿದರು. ಕುಂಬನ ಹಾಗೂ ಬೈಮನ ತಂಡಗಳ ನಡುವಿನ ಪಂದ್ಯದಲ್ಲಿ ಕುಂಬನ ತಂಡ ೭-೧ ಗೋಲುಗಳ ಅಮತರದಿಂದ ಗೆಲುವು ಸಾಧಿಸಿತು. ಕುಮಬನ ಪರ ಆಕಾಶ್ ೪, ಚೇತನ್ ೩ ಗೋಲು ಬಾರಿಸಿದರು. ಬೈಮನ ಪರ ವಿನ್ಸಿ ಏಕೈಕ ಗೋಲು ಹೊಡೆದರು.

ಸಂಕರನ ಹಾಗೂ ತುಂತಜ್ಜಿರ ತಂಡಗಳ ನಡುವಿನ ಪಂದ್ಯದಲ್ಲಿ ತುಂತಜ್ಜಿರ ೩-೧ ಗೋಲುಗಳಿಂದ ಗೆಲುವು ಸಾಧಿಸಿತು. ತುಂತಜ್ಜಿರ ಪರ ಜರಿ ೨ ಹಾಗೂ ನಿಕಿಲ್ ಒಂದು ಗೋಲು ಬಾರಿಸಿದರೆ, ಶಂಕರನ ಪರ ಸಮರ್ಥ್ ಏಕೈಕ ಗೋಲು ದಾಖಲಿಸಿದರು. ತುಂತಜ್ಜಿರ ಹಾಗೂ ಕಲ್ಲುಮುಟ್ಲು ನಡುವಿನ ಪಂದ್ಯದಲ್ಲಿ ಕಲ್ಲುಮುಟ್ಲು ೮-೦ ಗೋಲುಗಳ ಭಾರೀ ಅಂತರದಿAದ ಗೆಲುವು ಸಾಧಿಸಿತು. ಬಹುತೇಕ ಉತ್ತಮ ಆಟಗಾರರನ್ನೊಳಗೊಂಡಿರುವ ಕಲ್ಲುಮುಟ್ಲು ಪರ ಭವನ್ ೩, ಕವನ್ ೨, ನಿಶಿತ್ ೨, ವಿನೋದ್ ೧ ಗೋಲು ದಾಖಲಿಸಿದರು. ಮುಕ್ಕಾಟಿ ಎ ಹಾಗೂ ಕುಂಬನ ನಡುವಿನ ಪಂದ್ಯದಲ್ಲಿ ಕುಂಬನ ತಂಡ ೫-೪ ಗೋಲುಗಳ ಅಂತರದಿAದ ಗೆಲುವು ಸಾಧಿಸಿತು. ಕುಂಬನ ಪರ ಆಕಾಶ್ ೩ ಗೋಲು ದಾಖಲಿಸಿದರೆ, ಅನು ೨ ಗೋಲು ಬಾರಿಸಿದರು. ಮುಕ್ಕಾಟಿ ಪರ ಹರ್ಷ ಹಾಗೂ ದಯಾ ತಲಾ ಎರಡು ಗೋಲು ದಾಖಲಿಸಿದರು. ಕಲ್ಲುಮುಟ್ಲು ಹಾಗೂ ಕುಟ್ಟನ ನಡುವಿನ ಪಂದ್ಯದಲ್ಲಿ ಕಲ್ಲುಮುಟ್ಲು ತಂಡ ೩-೦ ಗೋಲಿನಿಂದ ಗೆಲುವು ಸಾಧಿಸಿತು. ಕಲ್ಲುಮುಟ್ಲು ಪರ ನಿಶಿತ್, ಕವನ್, ಪ್ರಜ್ವಲ್ ಗೋಲು ದಾಖಲಿಸಿದರು.